
ಕೇವಲ 100 ರೂ.ಗೆ ನಡೆಯಿತು ಕೊಲೆ: ಸಿಮೆಂಟ್ ಬ್ಲಾಕ್ ನಿಂದ ಹೊಡೆದು ಸಹೋದ್ಯೋಗಿಯ ಹತ್ಯೆ
Sunday, March 6, 2022
ಮುಂಬೈ: ಕೇವಲ 100 ರೂ. ವಿಚಾರಕ್ಕಾಗಿ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಹತ್ಯೆಗೈದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜಸ್ತಾನ ಮೂಲದ ಅರ್ಜುನ್ ಯಶ್ವಂತ್ ಸಿಂಗ್ ಮೃತಪಟ್ಟ ದುರ್ದೈವಿ. ಮನೋಜ್ ಕೊಲೆಗೈದ ಆರೋಪಿ.
ಅರ್ಜುನ್ ಯಶ್ವಂತ್ ಸಿಂಗ್ ಸಹೋದ್ಯೋಗಿ ಮನೋಜ್ ಎಂಬಾತನಿಂದ 100 ರೂ. ಸಾಲ ಪಡೆದಿದ್ದನು. ಇದೇ ವಿಚಾರವಾಗಿ ಗುರುವಾರ ರಾತ್ರಿ ಮದ್ಯಸೇವನೆ ಮಾಡಿರುವ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಸಿಮೆಂಟ್ ಬ್ಲಾಕ್ನಿಂದ ತಲೆಗೆ ಹೊಡೆದು ಮನೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸಿಮೆಂಟ್ ಬ್ಲಾಕ್ ನಿಂದ ಬಲವಾದ ಏಟು ಬಿದ್ದಿರುವುದರಿಂದ ಗಂಭೀರವಾಗಿ ಗಾಯಗೊಂಡ ಅರ್ಜುನ್ ಯಶ್ವಂತ್ ಸಿಂಗ್ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ವಿಪಿ ರೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.