ಮಂಗಳೂರು: ಪ್ರೇಮವೈಫಲ್ಯದಿಂದ ಮನನೊಂದ ನೇಣಿಗೆ ಶರಣಾದ 19ರ ಯುವಕ
Wednesday, March 16, 2022
ಮಂಗಳೂರು: ಪ್ರೇಮವೈಫಲ್ಯದಿಂದ ಮನನೊಂದು 19 ವರ್ಷದ ಯುವಕನೋರ್ವನು ನೇಣಿಗೆ ಕತ್ತು ಒಡ್ಡಿರುವ ಘಟನೆ ನಗರದ ಕುತ್ತಾರು ಸಂತೋಷ್ ನಗರ ಎಂಬಲ್ಲಿ ನಡೆದಿದೆ.
ಸಂತೋಷ್ ನಗರ ನಿವಾಸಿ ದೀಕ್ಷಿತ್ (19) ಆತ್ಮಹತ್ಯೆಗೆ ಮಾಡಿಕೊಂಡಿರುವ ದುರ್ದೈವಿ. ಮೂಲತಃ ಕಂಕನಾಡಿ ಬೈಪಾಸ್ ನ ಕದ್ಕೋರಿ ಗುಡ್ಡೆಯ ನಿವಾಸಿಗಳಾದ ದೀಕ್ಷಿತ್ ಕುಟುಂಬ ಕೆಲ ಸಮಯದಿಂದ ಸಂತೋಷ್ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿತ್ತು. ದೀಕ್ಷಿತ್ ನಿನ್ನೆ ಸಂಜೆ ತಾಯಿಯೊಂದಿಗೆ ಕುತ್ತಾರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ ಅಲ್ಲಿಂದ ಮನೆಗೆ ಹೋಗಿ ಬರುತ್ತೇನೆಂದು ಓರ್ವನೇ ಸಂತೋಷ್ ನಗರದ ಬಾಡಿಗೆ ಮನೆಗೆ ಬಂದಿದ್ದಾನೆ.
ಬಾಡಿಗೆ ಮನೆಗೆ ಬಂದು ಕೋಣೆಯೊಂದರ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಪ್ರೇಮವೈಫಲ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಮೃತ ದೀಕ್ಷಿತ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಉದ್ಯೋಗಿಯಾಗಿದ್ದು, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.