ಮಂಗಳೂರು ಏರ್ಪೋಟ್ ನಲ್ಲಿ ಅಕ್ರಮ ಸಾಗಾಟದ 25,000 ಯುಎಸ್ ಡಾಲರ್ ಸೀಜ್
Friday, April 1, 2022
ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ಪ್ರಯಾಣ ಬೆಳೆಸಲು ಮಂಗಳೂರು ಮೂಲದ ಪ್ರಯಾಣಿಕ ಯತ್ನಿಸುತ್ತಿದ್ದ. ಈತ ಸ್ಪೈಸ್ ಜೆಟ್ ಮೂಲಕ ದುಬೈಗೆ ಹಾರಲೆತ್ನಿಸುತ್ತಿದ್ದ. ಆದರೆ ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ಈತ ಅಕ್ರಮವಾಗಿ ದುಬೈಗೆ ವಿದೇಶಿ ಕರೆನ್ಸಿಯನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ತಕ್ಷಣ ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈತನಲ್ಲಿದ್ದ 18,80,000 ಲಕ್ಷ ರೂ. ಮೌಲ್ಯದ 25,000 ರೂ. ಯುಎಸ್ ಡಾಲರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಸೀಸ್ ಮಾಡಿದ್ದಾರೆ.