-->
ಏಳು ವರ್ಷವಿದ್ದಾಗ ಅವಮಾನ ಮಾಡಿದ ಟೀಚರ್ ಅನ್ನು 30 ವರ್ಷಗಳ ಬಳಿಕ‌ ಇರಿದು ಕೊಂದ: 2 ವರ್ಷಗಳ ಬಳಿಕ ಪ್ರಕರಣ ಬಯಲು

ಏಳು ವರ್ಷವಿದ್ದಾಗ ಅವಮಾನ ಮಾಡಿದ ಟೀಚರ್ ಅನ್ನು 30 ವರ್ಷಗಳ ಬಳಿಕ‌ ಇರಿದು ಕೊಂದ: 2 ವರ್ಷಗಳ ಬಳಿಕ ಪ್ರಕರಣ ಬಯಲು

ಬೆಲ್ಜಿಯಂ: ತನ್ನ ಏಳನೇ ವಯಸ್ಸಿನಲ್ಲಿರುವಾಗ ಟೀಚರ್ ಅವಮಾನಿಸಿರೋದಕ್ಕೆ ಇಲ್ಲೊರ್ವನು 30 ವರ್ಷಗಳ ಬಳಿಕ 101 ಬಾರಿ ಇರಿದು ಕೊಂದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. ಎರಡಯ ಎರಡು ವರ್ಷಗಳ ಹಿಂದಿನ ಪ್ರಕರಣದ ಕೊಲೆ ಆರೋಪಿ ಯಾರೆಂದು ಇದೀಗ ಬಹಿರಂಗಗೊಂಡಿದೆ. 

ಗೂಂಟರ್ ಊವೆಂಟ್ಸ್ ಎಂಬಾತನೇ ಇಂಥದ್ದೊಂದು ಕೃತ್ಯ ಎಸಗಿರೋದಾಗಿ ಎರಡು ವರ್ಷಗಳ ಬಳಿಕ ತಿಳಿದು ಬಂದಿದೆ. ಶಿಕ್ಷಕಿ ಮರಿಯಾ ವರ್ಲಿನ್ಡೆನ್ ಎಂಬಾಕೆ 101 ಬಾರಿ ಇರಿದು ಹತ್ಯೆಯಾದವರು. 

ಈ ಕೊಲೆ ನಡೆದದ್ದು 2020ರಲ್ಲಿ. ಆದರೆ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕಿ ಮರಿಯಾ ವರ್ಲಿನ್ಡೆನ್ ರಕ್ತಸಿಕ್ತ ದೇಹ ಆಕೆಯದ್ದೇ ಮನೆಯಲ್ಲಿ ಪತ್ತೆಯಾಗಿತ್ತು. ಮನೆಯಿಂದ ಯಾವುದೇ ಬೆಲೆಬಾಳುವ ಸಾಮಾಗ್ರಿ, ನಗದು, ಚಿನ್ನಾಭರಣ ದೋಚಿರಲಿಲ್ಲ. ಆದ್ದರಿಂದ ಇದು ದರೋಡೆಗಾಗಿ ನಡೆದಿರುವ ಕೊಲೆಯಲ್ಲ, ಬದಲಿಗೆ ವೈಯಕ್ತಿಕ ದ್ವೇಷದಿಂದ ನಡೆದ ಹತ್ಯೆ ಎಂದು ಪೊಲೀಸರಿಗೆ ಶಂಕಿಸಿದ್ದರು. ಆದರೆ ಎಷ್ಟೇ ತನಿಖೆ ನಡೆಸಿದರೂ ಕೊಲೆಯ ರಹಸ್ಯವನ್ನು ಭೇದಿಸಲು ಅವರಿಗೆ ಸಾಧ್ಯವೇ ಆಗಿರಲಿಲ್ಲ. ಏಕೆಂದರೆ ಶಿಕ್ಷಕಿಗೆ ಅಂಥಹ ಶತ್ರುಗಳಾರು ಇರಲಿಲ್ಲ. ಅನುಮಾನ ಮೇಲೆ ನೂರಾರು ಮಂದಿಯನ್ನು ವಿಚಾರಣೆ ನಡೆಸಿ ಡಿಎನ್ಎ ಪರೀಕ್ಷೆಗಳನ್ನು ನಡೆಸಿದರೂ ಹಂತಕನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. 

ಹೀಗೆಯೇ ಆಗಿದ್ದರೆ, ಈ ಕೊಲೆ ಪ್ರಕರಣ​ ಅಲ್ಲಿಗೇ ಮುಚ್ಚಿಹೋಗುತ್ತಿತ್ತು. ಆದರೆ ಗೂಂಟರ್ ಊವೆಂಟ್ಸ್ ತಾನು ಏಳನೇ ವಯಸ್ಸಿನಲ್ಲಿ ಇದ್ದಾಗ ಈ ಶಿಕ್ಷಕಿ ತನ್ನ ಮನಸ್ಸಿಗೆ ಘಾಸಿಯಾಗುವಂತೆ ನಡೆದುಕೊಂಡಿದ್ದರು. ಅದಕ್ಕಾಗಿಯೇ ಆಕೆಯ ಕೊಲೆ ಮಾಡಿದೆ ಎಂದು ತನ್ನ ಆಪ್ತಮಿತ್ರನಲ್ಲಿ ಹೇಳಿಕೊಂಡಿದ್ದ. ಇದರಿಂದ ಗಾಬರಿಗೊಂಡಿದ್ದ ಆತ ಎರಡು ವರ್ಷಗಳವರೆಗೆ ಪೊಲೀಸರಿಗೆ ಈ ವಿಚಾರ ತಿಳಿಸದೆ ಸುಮ್ಮನಿದ್ದ. ಆದರೆ ಈ ಪ್ರಕರಣದ ತನಿಖೆ ಜೋರಾಗುತ್ತಿದ್ದಂತೆಯೇ ಪೊಲೀಸರಲ್ಲಿ ಕೊಲೆಯ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ. ಇದರ ಆಧಾರದ ಮೇಲೆ ಗೂಂಟರ್ ಊವೆಂಟ್ಸ್ ನನ್ನು ಬಂಧಿಸಲಾಗಿದೆ. 

ಗೂಂಟರ್ ಊವೆಂಟ್ಸ್‌ 7 ವರ್ಷದ ಬಾಲಕನಾಗಿದ್ದಾಗ ಟೀಚರ್ ಆತನಿಗೆ ಅವಹೇಳನಕಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದರು. ಇದನ್ನು ಮರೆಯುವುದು ಸಾಧ್ಯವೇ ಅಗಿರಲಿಲ್ಲ. ಪದೇ ಪದೇ ಆ ಅವಮಾನ ಕಾಡುತ್ತಿತ್ತು. ಆದ್ದರಿಂದ ಕೊಲೆ ಮಾಡಿದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಅಂದಹಾಗೆ ಗೂಂಟರ್ ಊವೆಂಟ್ಸ್ ನಿರಾಶ್ರಿತರಿಗೆ ತನ್ನ ಶಕ್ತಿಮೀರಿ ಸಹಾಯ ಮಾಡುತ್ತಿದ್ದುದರಿಂದ ಆತ ಬಹು ಜನಪ್ರಿಯತೆ ಗಳಿಸಿದ್ದ. 

Ads on article

Advertise in articles 1

advertising articles 2

Advertise under the article