ಇನ್ ಸ್ಟಾಗ್ರಾಂನಲ್ಲಿ 7ಮಿಲಿಯನ್ ಫಾಲೋವರ್ಸ್ ಗಳನ್ನು ಗಳಿಸಿದ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ಮಾಜಿ ಪತ್ನಿ ಸಮಂತಾ
Thursday, March 24, 2022
ಹೈದರಾಬಾದ್: ಪ್ರಸಿದ್ಧ ತಾರಾ ಜೋಡಿ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ಜೋಡಿಯ ವಿಚ್ಛೇದನದ ವಿಚಾರ 2021ರಲ್ಲಿ ಭಾರೀ ಮಟ್ಟದಲ್ಲಿ ಸುದ್ದಿಯಾಗಿತ್ತು. 11 ವರ್ಷದ ತಮ್ಮ ಪ್ರೀತಿಯನ್ನು ಅಂತ್ಯಗೊಳಿಸಿದ ಈ ಜೋಡಿ ತಮ್ಮ ವಿಚ್ಛೇದನದ ನಿರ್ಧಾರವನ್ನು ಅಭಿಮಾನಿಗಳಿಗೆ ತಿಳಿಸಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಆ ಬಳಿಕ, ಈ ವಿಚಾರದ ಬಗ್ಗೆ ಸಮಂತಾ ಹಾಗೂ ನಾಗಚೈತನ್ಯ ಮೌನವನ್ನೇ ವಹಿಸಿದ್ದಾರೆ. ಆರೋಪ- ಪ್ರತ್ಯಾರೋಪ ಮೊದಲಾದವುಗಳನ್ನು ಮಾಡದೆ ಈ ಜೋಡಿ ಮಾಧ್ಯಮಗಳ ಮುಂದೆ ಗೌರವದಿಂದಲೇ ನಡೆದುಕೊಳ್ಳುತ್ತಿದ್ದಾರೆ.
ಆದರೆ, ನಟಿ ಸಮಂತಾ ತಮ್ಮ ಸಂಬಂಧದ ನೆನಪಿಗಾಗಿ ಯಾವ ಕುರುಹನ್ನೂ ಉಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬ ಸುದ್ದಿಗಳು ಕೇಳಬರುತ್ತಿವೆ. ಈಗಾಗಲೇ, ತಮ್ಮ ವಿವಾಹದ ಸಂದರ್ಭ ನಾಗಚೈತನ್ಯ ಕುಟುಂಬ ತಮಗೆ ನೀಡಿರುವ ಎಲ್ಲಾ ವಸ್ತುಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ. ಇದೀಗ ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯರನ್ನು ಇನ್‌ಸ್ಟಾಗ್ರಾಂನಲ್ಲೂ ಅನ್‌ಫಾಲೋ ಮಾಡಿದ್ದಾರೆ.
ಅಂದಹಾಗೆ, ನಾಗಚೈತನ್ಯ ಮಾ .21 ರಂದು ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದರು. ಅದರ ಬಳಿಕವೇ, ನಟಿ ಸಮಂತಾ ಮಾಜಿ ಪತಿಯನ್ನು ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಕೆಲ ಸಮಯದ ಹಿಂದೆ ನಟಿ ಸಮಂತಾ ನಾಗಚೈತನ್ಯರೊಂದಿಗಿದ್ದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಇದೀಗ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಹೀಗಿದ್ದರೂ, ನಟ ನಾಗಚೈತನ್ಯ ಮಾತ್ರ ಮಾಜಿ ಪತ್ನಿ ಸಮಂತಾರನ್ನು ಇನ್‌ಸ್ಟಾಗ್ರಾಂನಲ್ಲಿ ಇನ್ನೂ ಫಾಲೋ ಮಾಡುತ್ತಿದ್ದಾರೆ. ಸದ್ಯ, ಈ ವಿಚಾರ ಅಭಿಮಾನಿಗಳ ನಿದ್ದೆಗಡಿಸಿದೆ ಎಂದರೆ ತಪ್ಪಾಗುವುದಿಲ್ಲ. ಪತಿಯೊಂದಿಗೆ ಜತೆ ಯಾವುದೇ ಸಂಬಂಧ ಬೇಡ ಎಂಬಂತೆ ಸಮಂತಾ ವರ್ತಿಸುತ್ತಿದ್ದರೆ, ನಾಗಚೈತನ್ಯ ಮಾತ್ರ ಸಮಂತಾರೊಂದಿಗೆ ಅಂಟಿಕೊಂಡಿಯೇ ಇದ್ದಾರೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ.