
ಮಂಗಳೂರು: ಕ್ಯಾಂಪ್ಕೊ ಸಂಸ್ಥೆಗೆ ನಕಲಿ ಕೊಕ್ಕೊ ನೀಡಿ 9.71 ಕೋಟಿ ರೂ. ವಂಚನೆಗೈದ ಆರೋಪಿ ಅರೆಸ್ಟ್
Wednesday, March 9, 2022
ಮಂಗಳೂರು: ಆಫ್ರಿಕಾ ದೇಶದಲ್ಲಿ ಬೆಳೆದ ಕೊಕ್ಕೊ ಬೀಜಗಳನ್ನು ಥಾಯ್ ಲ್ಯಾಂಡ್ ದೇಶದ ಕೊಕ್ಕೊ ಬೀಜಗಳೆಂದು ನಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ಯಾಂಪ್ಕೊ ಸಂಸ್ಥೆಗೆ 9.72 ಲಕ್ಷ ರೂ. ವಂಚನೆ ಮಾಡಿರುವ ಆರೋಪದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಭಾರತೀಯ ಪ್ರಜೆಯಾಗಿರುವ ಸದ್ಯ ದುಬೈ ವಾಸಿಯಾಗಿರುವ ವಿನ್ಸಿ ಫೆರ್ನಾಂಡೀಸ್ ಬಂಧಿತ ಆರೋಪಿ.
ಪುತ್ತೂರಿನ ಕ್ಯಾಂಪ್ಕೊ ಸಂಸ್ಥೆಯು ಜೀವನ್ ಲೋಬೊ ಅಲಿಯಾಸ್ ಗ್ರೆಗರಿ ಲೋಬೊ ಅವರ ಕೋಸ್ಫಾಕ್ ಏಶಿಯಾ ಇಂಟರ್ ನ್ಯಾಶನಲ್ ಕಂಪೆನಿ ಲಿ. ಮೂಲಕ ವಿದೇಶದಿಂದ ಕೊಕ್ಕೊ ಬೀಜಗಳನ್ನು ಸರಬರಾಜು ಮಾಡುತ್ತಿತ್ತು. ಜೀವನ್ ಲೋಬೊ ವಿದೇಶದಲ್ಲಿದ್ದ ಮತ್ತೋರ್ವ ಭಾರತೀಯ ವಿನ್ಸಿ ಪಿಂಟೊ ಮೂಲಕ ಕೊಕ್ಕೊ ಬೀಜಗಳನ್ನು ತರಿಸಿಕೊಳ್ಳುತ್ತಿದ್ದರು. 2019ರಂದು ಜೀವನ್ ಲೋಬೊ ಹಾಗೂ ವಿನ್ಸಿ ಪಿಂಟೊ ಒಳಸಂಚು ನಡೆಸಿ ಕಾನೂನು ಬಾಹಿರವಾಗಿ ಆಫ್ರಿಕಾ ದೇಶದಲ್ಲಿ ಬೆಳೆದ ಆಫ್ರಿಕಾ ದೇಶದಲ್ಲಿ ನಿಯಮಬಾಹಿರವಾಗಿ ಬೆಳೆದ ಕೊಕ್ಕೊ ಬೀಜಗಳನ್ನು ಥಾಯ್ ಲ್ಯಾಂಡ್ ದೇಶಕ್ಕೆ ತರಿಸಿಕೊಂಡು ಅಲ್ಲಿ ಸಂಸ್ಕರಿಸಿ ಥಾಯ್ ಲ್ಯಾಂಡ್ ದೇಶದಲ್ಲಿ ಬೆಳೆದ ಕೊಕ್ಕೊ ಬೀಜಗಳೆಂದೇ ನಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕ್ಯಾಂಪ್ಕೊ ಸಂಸ್ಥೆಗೆ ನೀಡಿದ್ದರು.
ಈ ಮೂಲಕ ಕ್ಯಾಂಪ್ಕೊ ಸಂಸ್ಥೆಗೆ 9,71,50,113 ಲಕ್ಷ ರೂ. ವಂಚನೆ ಮಾಡಿದ್ದರು. ಈ ಬಗ್ಗೆ ಇಬ್ಬರ ಮೇಲೂ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನ್ಸಿ ಪಿಂಟೊ ಎಂಬಾತನನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.