
ಎತ್ತಿನ ಬಂಡಿಗೆ ದ್ವಿಚಕ್ರ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತ್ಯು
Thursday, March 3, 2022
ವಿಜಯನಗರ: ಎತ್ತಿನ ಬಂಡಿಗೆ ದ್ವಿಚಕ್ರ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಕೂಡ್ಲಿಗಿ ಹೊರವಲಯದ ಚೋರನೂರು ರಸ್ತೆಯ ಪಿರಾಮಿಡ್ ಬಳಿ ನಡೆದಿದೆ.
ಅಮರದೇವರ ಗುಡ್ಡ ತಾಂಡಾದ ನಿವಾಸಿ ವಿನಯ್ ರಾಥೋಡ್( 26) ಮೃತ ಯುವಕ.
ವಿನಯ್ ರಾಥೋಡ್ ಅಮರದೇವರ ಗುಡ್ಡ ತಾಂಡಾದಿಂದ ಕೂಡ್ಲಿಗಿ ಕಡೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿನಯ್ ರಾಥೋಡ್ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಸೇರಿದಂತೆ, ಬಂಜಾರ ಸಂಘಟನೆಗಳ ಮುಖಂಡನಾಗಿ ಸಕ್ರಿಯನಾಗಿದ್ದ.