ಬಸ್ ನಲ್ಲಿ ಸಹಪ್ರಯಾಣಿಕೆಗೆ ಕಿರುಕುಳ ನೀಡಿದ ಕಾಮುಕ ಅಂದರ್
Saturday, March 19, 2022
ಮಂಗಳೂರು: ಕೆಎಸ್ಆರ್ ಟಿಸಿ ಬಸ್ ನಲ್ಲಿ ಸಹ ಪ್ರಯಾಣಿಕೆಗೆ ಕಿರುಕುಳ ನೀಡಿರುವ ಆರೋಪದಲ್ಲಿ ಕಾಮುಕನೋರ್ವನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಮೂಲದ ವಾಜಿದ್ ಎ ಜಮಖಾನಿ ಬಂಧಿತ ಆರೋಪಿ. ಸುಳ್ಯದಿಂದ ಮಂಗಳೂರಿಗೆ ಕೇಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಈಕೆ ಕುಳಿತಿದ್ದ ಸೀಟ್ ನಲ್ಲಿ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ. ಈ ಸಂದರ್ಭ ಪ್ರಯಾಣದ ವೇಳೆ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದ ಎನ್ನಲಾಗಿದೆ.
ಈ ಬಗ್ಗೆ ಯುವತಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.