
ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿರೋದಕ್ಕೆ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ!
Wednesday, March 9, 2022
ಕೊಚ್ಚಿ: ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿರೋದಕ್ಕೆ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ.
ಪೆರುಂಬವೂರ್ ಮೂಲದ ಎಂ.ಎಸ್.ವೈಷ್ಣವಿ ಹಲ್ಲೆಗೊಳಗಾದ ಸೊಸೆ. ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ವೈಷ್ಣವಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಆಕಡಗೆ ಅಂಗಮಲಿಯಲ್ಲಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ.
ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್ ಎಂಬುವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ವೈಷ್ಣವಿ ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದ್ದರು. ಪರಿಣಾಮ ಅತ್ತೆಯ ಪ್ರಿಯಕರ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆಂದು ವೈಷ್ಣವಿ ಆರೋಪ ಮಾಡಿದ್ದಾರೆ.
ಅತ್ತೆಯ ಪ್ರಿಯಕರ, ವೈಷ್ಣವಿ ಪತಿಯ ಮನೆಯಿಂದ ಸುಮಾರು 3 ಕಿ.ಮೀ. ದೂರದ ನಿವಾಸಿಯಾಗಿದ್ದನು. ಆತ ಮನೆಯನ್ನು ಪ್ರವೇಶಿಸುವುದನ್ನು ತಡೆಯಲು ವೈಷ್ಣವಿ ಯತ್ನಿಸಿದ್ದಳು. ಈ ಕೋಪದಲ್ಲಿ ಆತ ಭಾನುವಾರ ರಾತ್ರಿ ನೆರೆ ಮನೆಯವರೊಂದಿಗೆ ವೈಷ್ಣವಿ ಮಾತನಾಡುತ್ತಿರುವಾಗ ದಾಳಿ ನಡೆಸಿದ್ದಾನೆ. ಈ ವೇಳೆ ಆತ ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಆಗ ಪತ್ನಿಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪತಿ ಮುಕೇಶ್ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಆತ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದಾಗ ಆರೋಪಿ ಪರಾರಿಯಾಗಿದ್ದಾನೆ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ವೈಷ್ಣವಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ವೈಷ್ಣವಿ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅತ್ತೆ ಹಾಗೂ ಪತಿಯ ಸಹೋದರ ತನಗೆ ಕಿರುಕುಳ ನೀಡುತ್ತಿದ್ದಾರೆ. ವೈಷ್ಣವಿ ಹೇಳಿದ ಎಲ್ಲ ಘಟನೆಯನ್ನು ಮುಕೇಶ್ ಪತ್ನಿಯ ಇನ್ಸ್ಟಾಗ್ರಾಂನಲ್ಲಿ ಬಯಲು ಮಾಡಿದ್ದಾರೆ. ಮದುವೆಯಾದ ಕೆಲವು ತಿಂಗಳುಗಳ ಬಳಿಕ ತನ್ನ ಅತ್ತೆ ನಿತ್ಯವು ಕಿರುಕುಳ ನೀಡುತ್ತಿದ್ದರು. ಪತಿ ಕೆಲಸಕ್ಕೆ ಹೋದ ಬೆನ್ನಲ್ಲೇ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಊಟವನ್ನು ಕೊಡದೇ ಹಿಂಸಿಸುತ್ತಿದ್ದರು ಎಂದು ಎಂದು ವೈಷ್ಣವಿ ಆರೋಪ ಮಾಡಿದ್ದಾರೆ.