
ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಮೃತಪಟ್ಟ ಬಿಎಸ್ಎಫ್ ಯೋಧ
Sunday, March 6, 2022
ಅಮೃತಸರ(ಪಂಜಾಬ್): ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಿರುವ ಬಿಎಸ್ಎಫ್ ಯೋಧ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ಅಮೃತಸರ ಬಿಎಸ್ಎಫ್ ಮುಖ್ಯಕಚೇರಿ 144 ಬಿಎನ್ ಖಾಸಾದಲ್ಲಿ ಈ ದುರ್ಘಟನೆ ನಡೆದಿದೆ. ಸತ್ತೆಪ್ಪ ಎಸ್ಕೆ ಎಂಬಾತ ಗುಂಡು ಹಾರಿಸಿರುವ ಬಿಎಸ್ಎಫ್ ಯೋಧ. ಈ ಗುಂಡಿನ ದಾಳಿಯಲ್ಲಿ ಸತ್ತೆಪ್ಪ ಸೇರಿ ಐವರು ಮೃತಪಟ್ಟಿದ್ದಾರೆ. ಅಲ್ಲದೆ ಮತ್ತೋರ್ವ ಗಂಭೀರ ಗಾಯವಾಗಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ಬಗ್ಗೆ ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತೆಪ್ಪ ಎಸ್ಕೆ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.