ನೃತ್ಯದಿಂದ ಡಿಸ್ಟರ್ಬ್ ಆಗುತ್ತಿದೆಯೆಂದು ಅರ್ಧಕ್ಕೆ ನಿಲ್ಲಿಸಿದ ನ್ಯಾಯಾಧೀಶರ ಮಾತಿಗೆ ಕಣ್ಣೀರಾದ ಪ್ರಸಿದ್ಧ ಮೋಹಿನಿಯಾಟ್ಟಂ ನೃತ್ಯಗಾತಿ
Wednesday, March 23, 2022
ಕೊಚ್ಚಿ: ಮೋಹಿನಿಯಾಟ್ಟಂನ ಖ್ಯಾತ ನೃತ್ಯಗಾತಿ ಡಾ.ನೀನಾ ಪ್ರಸಾದ್ ಅವರ ನೃತ್ಯವನ್ನು ನಿಲ್ಲಿಸುವಂತೆ ನ್ಯಾಯಾಧೀಶರೊಬ್ಬರು ನಿಲ್ಲಿಸಬೇಕೆಂದು ಪೊಲೀಸ್ ದೂರು ನೀಡಿರುವುದರಿಂದ ಅತೀವ ದುಃಖಕ್ಕೆ ಒಳಗಾಗಿದ್ದೇನೆಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಡಾ.ನೀನಾ ಪ್ರಸಾದ್ ತಮ್ಮ ಜೀವನದಲ್ಲಿ ಹಿಂದೆಂದೂ ಆಗದಂಥ ಕಹಿ ಘಟನೆ ನಡೆದಿದೆ ಎಂದು ಕಣ್ಣೀರು ಹಾಕಿದ್ದಾರೆ. ಆಗಿದ್ದೇನೆಂದರೆ, ಕೇರಳದ ಸರ್ಕಾರಿ ಮೋಯನ್ ಎಲ್‌ಪಿ ಶಾಲೆಯಲ್ಲಿ ಡಾ.ನೀನಾ ಪ್ರಸಾದ್ ನೃತ್ಯ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಇದೇ ಶಾಲೆಯ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಧೀಶ ಡಾ.ಕಲಾಂ ಪಾಷಾ ಮನೆಯಿದೆ. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರನ್ನು ಕರೆಸಿರುವ ನ್ಯಾಯಾಧೀಶ ಡಾ.ಕಲಾಂ ಪಾಷಾ ಅವರು, ಕಾರ್ಯಕ್ರಮವನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಆದ್ದರಿಂದ ರಂಗಮಂದಿರಕ್ಕೆ ನುಗ್ಗಿರುವ ಪೊಲೀಸರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಇದರಿಂದ ಆಘಾತಗೊಂಡ ಕಲಾವಿದೆ ಡಾ.ನೀನಾ ಪ್ರಸಾದ್ ಹಾಗೂ ಅಲ್ಲಿ ನೆರೆದಿರುವವರು, ಕಾರಣ ಕೇಳಿದಾಗ ಪೊಲೀಸರು ಡಾ.ಕಲಾಂ ಪಾಷಾ ಸೂಚಿಸಿದ್ದಾಗಿ ವಿವರಿಸಿದ್ದಾರೆ. ಈ ಬಗ್ಗೆ ಕಲಾವಿದೆ ಡಾ.ನೀನಾ ಪ್ರಸಾದ್ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ನನಗೆ ದುಃಖ ಮಡುಗಟ್ಟಿದೆ, ಕಣ್ಣೀರು ನಿಲ್ಲುತ್ತಿಲ್ಲ.. ನನ್ನ ಮೋಹಿನಿಯಾಟ್ಟಂ ಪ್ರದರ್ಶನವನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಹೇಳುವುದು ನನಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ಕೇರಳದ ಕಲೆ ಹಾಗೂ ಸಂಸ್ಕೃತಿಗೆ ಮಾಡಿರುವ ಅವಮಾನ ಎಂದಿದ್ದಾರೆ. ಅರ್ಜುನ ಹಾಗೂ ಕೃಷ್ಣನ ನಿಕಟ ಬಾಂಧವ್ಯದ ಕುರಿತು ಹೇಳುವ ‘ಸಖ್ಯಮ್’ (ಸ್ನೇಹ) ಎಂಬ ವಿಷಯಾಧಾರಿತ ನೃತ್ಯ ಮಾಡುತ್ತಿದ್ದೆ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ನೃತ್ಯ. ಕಾರ್ಯಕ್ರಮ ಆರಂಭಗೊಂಡ 40 ನಿಮಿಷಗಳ ಬಳಿಕ ಪೊಲೀಸರು ಸಭಾಂಗಣಕ್ಕೆ ಪ್ರವೇಶಿಸಿದ್ದಾರೆ. ಆಯೋಜಕರು ಪೊಲೀಸರ ಸೂಚನೆ ಮೇರೆಗೆ ಪ್ರದರ್ಶನ ನಿಲ್ಲಿಸುವಂತೆ ವಿನಂತಿಸಿದ್ದಾರೆ.
ಕಾರ್ಯಕ್ರಮದ ಸಂಗೀತ ಜೋರಾಗಿ ಕೇಳಿತ್ತಿದೆ ಎಂದು ಪೊಲೀಸರಿಗೆ ನ್ಯಾಯಾಧೀಶರು ದೂರು ನೀಡಿದ್ದರಂತೆ. ಶಾಸ್ತ್ರೀಯ ನೃತ್ಯದಲ್ಲಿ ಸಂಗೀತ ಯಾವತ್ತೂ ಜೋರಾಗಿ ಇರುವುದಿಲ್ಲ. ಅಷ್ಟೇ ಅಲ್ಲದೇ, ನನ್ನದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಪಿಟೀಲು, ಮೃದಂಗದಂತಹ ಮೃದುವಾದ ಸಂಗೀತ ವಾದ್ಯಗಳನ್ನು ಬಳಸಲಾಗಿತ್ತು. ಆದರೆ ಜೋರಾದ ಸಂಗೀತ ಎಂದು ಹೇಳಿ ನೃತ್ಯ ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಈ ನ್ಯಾಯಮೂರ್ತಿ ಕಲಾಂ ಪಾಷಾ ಈ ಹಿಂದೆಯೂ ವಿವಾದದಲ್ಲಿ ಸಿಲುಕಿದವರೇ. ತ್ರಿವಳಿ ತಲಾಖ್ ನಿಷೇಧದ ಬಳಿಕವೀ ಅವರು ಪತ್ನಿಗೆ ತ್ರಿವಳಿ ತಲಾಖ್ ಹೇಳಿದ್ದರೆಂದು ನ್ಯಾಯಾಧೀಶರ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಅವರ ಅರ್ಜಿ ವಜಾಗೊಂಡಿತ್ತು