
ಅನಧಿಕೃತ ಈಜುಕೊಳಕ್ಕೆ ಇಳಿದ ವಿದ್ಯಾರ್ಥಿ ಮೃತ್ಯು: ಮಾಲಕ ಪರಾರಿ
Tuesday, March 1, 2022
ವಿಜಯನಗರ: ಅನಧಿಕೃತ ಈಜುಕೊಳದಲ್ಲಿ ಈಜಲು ಹೋದ ದ್ವಿತೀಯ ವಿದ್ಯಾರ್ಥಿಯೋರ್ವನು ಮೃತಪಟ್ಟ ಘಟನೆ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈಜುಕೊಳದ ಮಾಲಕ ಪರಾರಿ ಆಗಿದ್ದಾನೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಮಾಚಿಹಳ್ಳಿ ಗ್ರಾಮದ ಚೇತನ್ ಮೃತಪಟ್ಟ ವಿದ್ಯಾರ್ಥಿ.
ಚೇತನ್ ತನ್ನ ಸ್ನೇಹಿತರೊಂದಿಗೆ ಮೋಜಿಗಾಗಿ ತೆರಳಿದ್ದು, ಅಲ್ಲಿ ಈಜುಕೊಳಕ್ಕೆ ಇಳಿದ ಸಂದರ್ಭ ಈ ದುರಂತ ಸಂಭವಿಸಿದೆ. ಇಲ್ಲಿನ ಶೃಂಗಾರತೋಟ ಸಮೀಪ ಇರುವ ನಂದಿ ವೈಟ್‌ಹೌಸ್‌ನಲ್ಲಿ ಈ ಅವಘಡ ಸಂಭವಿಸಿದೆ. ಸರ್ಕಾರದ ಯಾವುದೇ ಅನುಮತಿ ಪಡೆಯದೆ ಇಲ್ಲಿ ಈಜುಕೊಳ ಹಾಗೂ ಸಭಾಂಗಣವನ್ನು ನಿರ್ಮಿಸಲಾಗಿದೆ. ಈ ದುರ್ಘಟನೆ ನಡೆಯುತ್ತಿದ್ದಂತೆ ನಂದಿ ವೈಟ್‌ಹೌಸ್ ಮಾಲಕ ರಾಜು ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಹರಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.