-->
ಆಟೊ ಚಾಲಕನ ನಿರ್ಲಕ್ಷ್ಯಕ್ಕೆ ತಾಯಿಯ ಕಣ್ಣೆದುರೇ ಬಾಲಕಿ ರಸ್ತೆ ಅಪಘಾತಕ್ಕೆ ಬಲಿ!

ಆಟೊ ಚಾಲಕನ ನಿರ್ಲಕ್ಷ್ಯಕ್ಕೆ ತಾಯಿಯ ಕಣ್ಣೆದುರೇ ಬಾಲಕಿ ರಸ್ತೆ ಅಪಘಾತಕ್ಕೆ ಬಲಿ!

ಬೆಂಗಳೂರು: ಗ್ಯಾಸ್ ಸಿಲಿಂಡರ್ ಸಾಗಾಟ ವಾಹನ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. 

ನಾಗಮಂಗಲ ಮೂಲದ ನಾಲ್ಕೂವರೆ ವರ್ಷದ ಭುವನಾ ಮೃತಪಟ್ಟ ಬಾಲಕಿ. ಈ ದುರ್ಘಟನೆಯ ಬಳಿಕ ಚಾಲಕ ಧನಂಜಯ ಪರಾರಿಯಾಗಿದ್ದಾನೆ.‌ ಬಾಲಕಿ ಭುವನಾ ತಾಯಿಯೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. 

ನಾಗಮಂಗಲ ಮೂಲದ ದಂಪತಿ ಬೆಂಗಳೂರಿನ ಕಾವೇರಿಪುರದಲ್ಲಿ ನೆಲೆಸಿದ್ದರು. ಬಾಲಕಿ ತನ್ನ ತಾಯಿಯೊಂದಿಗೆ ಎಳನೀರು ಕುಡಿಯಲು ರಸ್ತೆಯಲ್ಲಿ ಸಂಚರಿಸುತ್ತಿದ್ದಳು. ಈ ಸಂದರ್ಭ ಅಲ್ಲೇ ಪಕ್ಕದಲ್ಲೇ ನಿಲ್ಲಿಸಿದ್ದ ಗ್ಯಾಸ್​ ಸಾಗಿಸುವ ಆಟೋವನ್ನು ಚಾಲಕ ಆಟೋ ಹ್ಯಾಂಡ್​ ಬ್ರೇಕ್​ ಹಾಕದೆ ನಿಲ್ಲಿಸಿದ್ದಾನೆ. ಚಾಲಕ ಇಳಿದಿದ್ದರಿಂದ ಆಟೋ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ತಾಯಿ ಮಗಳಿಗೆ ಢಿಕ್ಕಿ ಹೊಡದಿದೆ.

 ಈ ಸಂದರ್ಭ ಆಟೊ ಬಾಲಕಿಯ ಕುತ್ತಿಗೆ ಮೇಲೆಯೇ ಸಾಗಿದೆ. ತಕ್ಷಣ ಆಟೋ ಚಾಲಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಬದುಕುಳಿಯಲಿಲ್ಲ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಆಟೋ ಚಾಲಕ ಧನಂಜಯ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Ads on article

Advertise in articles 1

advertising articles 2

Advertise under the article