ಸೃಷ್ಟಿಯ ವೈಚಿತ್ರ್ಯ: ಮಹಿಳೆಯೋರ್ವರಿಗೆ ಜನಿಸಿತು ಎರಡು ತಲೆ, ಮೂರು ಕೈಗಳ ಮಗು!
Friday, April 1, 2022
ಇಂದೋರ್: ಕೆಲವೊಮ್ಮೆ ಸೃಷ್ಟಿಯಲ್ಲಿ ಏನೇನೋ ವೈಚಿತ್ರ್ಯಗಳು ನಡೆಯುತ್ತಿರುತ್ತದೆ. ಕೆಲವೊಂದು ನಮಗೆ ಸಹ್ಯ ಎನಿಸಿದರೂ, ಕೆಲವೊಂದು ವೈಚಿತ್ರ್ಯಗಳು ನಮ್ಮನ ಮಾನಸಿಕ ಸ್ಥಿತಿಯನ್ನೇ ಅಧೀರರನ್ನಾಗಿಸುತ್ತದೆ. ಅಂಥಹದ್ದೇ ಒಂದು ಘಟನೆ ಇಂದೋರ್ ನಲ್ಲಿ ಜನಿಸಿದೆ. ಇಲ್ಲಿನ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳಿರುವ ಶಿಶುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನ ರತ್ಲಾಮ್ ನಲ್ಲಿ ನಡೆದಿದೆ. ಇದೋಗ ಈ ನವಜಾತ ಶಿಶುವನ್ನು ಇಂದೋರ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಮಗುವನ್ನು ಶಿಶುವೈದ್ಯ ವಿಭಾಗದ ಐಸಿಯುಗೆ ದಾಖಲಿಸಲಾಗಿದ್ದು, ಅಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿಗೆ ಈ ಶಿಶು ಮೊದಲ ಮಗವಾಗಿದ್ದು, ಮೊದಲು ಸೋನೋಗ್ರಫಿ ವರದಿಯಲ್ಲಿ ಅವಳಿ - ಜವಳಿ ಮಕ್ಕಳಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಇದೀಗ ಅಪರೂಪದ ಪ್ರಕರಣವಾಗಿದೆ ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಬೃಜೇಶ್ ಲಹೋಟಿ ತಿಳಿಸಿದ್ದಾರೆ.
ಶಿಶುವಿನ ದೇಹದ ಮೇಲಿನ ಭಾಗವು ಸಾಮಾನ್ಯವಾಗಿದೆ. ಆದರೆ ಮಗುವಿಗೆ ಎರಡು ಬೆನ್ನುಹುರಿಗಳಿದ್ದು, ಒಂದು ಹೊಟ್ಟೆ ಇದೆ. ಇದು ತುಂಬಾ ಸಂಕೀರ್ಣವಾದ ಸ್ಥಿತಿಯಾಗಿದೆ. ಮಗುವಿಗೆ ಡೈಸೆಫಾಲಿಕ್ ಪ್ಯಾರಾಪಾಗಸ್ ಎಂಬ ಸ್ಥಿತಿಯನ್ನು ಹೊಂದಿದೆ. ಮಗು ಸುಮಾರು 3 ಕೆಜಿ ತೂಕವಿದ್ದು, ಮಗುವಿನ ದೇಹದಲ್ಲಿ ಚಲನೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.