Actress died in Road Accident- ಭೀಕರ ರಸ್ತೆ ಅಪಘಾತ: ಖ್ಯಾತ ನಟಿ ಡಾಲಿ ಡಿಕ್ರೂಜ್ ಸಹಿತ ಮೂವರ ದಾರುಣ ಸಾವು!
ಭೀಕರ ರಸ್ತೆ ಅಪಘಾತ: ಖ್ಯಾತ ನಟಿ ಡಾಲಿ ಡಿಕ್ರೂಜ್ ಸಹಿತ ಮೂವರ ದಾರುಣ ಸಾವು!
26 ವಯಸ್ಸಿನ ಖ್ಯಾತ ತೆಲುಗು ನಟಿ ಗಾಯತ್ರಿ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಸ್ನೇಹಿತ ಹಾಗೂ ಮತ್ತೋರ್ವ ಮಹಿಳೆ ಕೂಡ ಮೃತಪಟ್ಟಿದ್ದಾರೆ.
ಗಚ್ಚಿಬೌಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ 26 ವರ್ಷ ವಯಸ್ಸಿನ ಗಾಯತ್ರಿ ಮೃತಪಟ್ಟಿದ್ದರು. ಡಾಲಿ ಡಿಕ್ರೂಜ್ ಎಂಬ ಹೆಸರಿನಿಂದ ಅವರು ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು.
ಹೋಳಿ ಸಂಭ್ರಮಾಚರಣೆ ಮುಗಿಸಿ ಸ್ನೇಹಿತನ ಜತೆ ಡಾಲಿ ಮನೆಗೆ ಮರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ.
ಭೀಕರ ಅಪಘಾತದಿಂದ ಡಾಲಿ ಡಿಕ್ರೂಜ್ ಸ್ಥಳದಲ್ಲೇ ಮರತಪಟ್ಟಿದ್ದಾರೆ. ಸ್ನೇಹಿತ ರಾಥೋಡ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಕೂಡ ಉಳಿಸಲು ಸಾಧ್ಯವಾಗಲಿಲ್ಲ.
ಕಾರು ನಿಯಂತ್ರಣ ತಪ್ಪಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ 38 ವರ್ಷದ ಮಹಿಳೆಯೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದ್ದರಿಂದ ಈ ಅಪಘಾತದಲ್ಲಿ ಒಟ್ಟು 3 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.