-->
Drug peddlers new Technics - ಮಾಡುವುದು ತೀರ್ಥಯಾತ್ರೆ: ಇವರ ಇನ್ನೊಂದು ಮುಖ ಎಷ್ಟೊಂದು ಕರಾಳ!

Drug peddlers new Technics - ಮಾಡುವುದು ತೀರ್ಥಯಾತ್ರೆ: ಇವರ ಇನ್ನೊಂದು ಮುಖ ಎಷ್ಟೊಂದು ಕರಾಳ!

ಮಾಡುವುದು ತೀರ್ಥಯಾತ್ರೆ: ಇವರ ಇನ್ನೊಂದು ಮುಖ ಎಷ್ಟೊಂದು ಕರಾಳ!





ತೀರ್ಥ ಯಾತ್ರೆಯ ನೆಪದಲ್ಲಿ ಈ ನಾಲ್ವರು ನಡೆಸುತ್ತಿದ್ದ ಕರಾಳ ದಂಧೆ ಬಯಲಾಗಿದೆ. ವಿಶಾಖಪಟ್ಟಣದಿಂದ ಕೊಲ್ಲಂಗೆ ಕಾರಿನಲ್ಲಿ ಸಾಗಿಸುತ್ತಿದ್ದ 24 ಕೆಜಿ ಗಾಂಜಾವನ್ನು ಕೇರಳ ಪೊಲೀಸರು ವಶಪಡಿಸಿದ್ದು ದಂಪತಿ ಸಹಿತ ನಾಲ್ವರನ್ನು ಬಂಧಿಸಲಾಗಿದೆ.




ಕೊಲ್ಲಂ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯಪಡೆ ವಿಶೇಷ ತಂಡ ಈ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಆಟ್ಟಿಂಗಲ್ ನಿವಾಸಿ ವಿಷ್ಣು (27), ಅವರ ಪತ್ನಿ ಸೂರ್ಯ (25), ಅಭಯ್ ಸಾಬು (21) ಉಣ್ಣಿಕೃಷ್ಣನ್ (27) ಎಂದು ಗುರುತಿಸಲಾಗಿದೆ.




ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುವ ರೀತಿಯಲ್ಲಿ ತೆರಳುತ್ತಿದ್ದ ದಂಪತಿಯ ಕಾರನ್ನು ತಪಾಸಣೆ ನಡೆಸಿದಾಗ ಈ ಗಾಂಜಾ ಪತ್ತೆಯಾಗಿದೆ.




ಕಾರಿನ ಡೋರ್ ಪ್ಯಾನೆಲ್ ನಲ್ಲಿ ಇವರು ಗಾಂಜಾ ಸಾಗಿಸುತ್ತಿದ್ದರು. ಈ ರಹಸ್ಯವನ್ನು ಭೇದಿಸಿದ್ದಾಗ ಗಾಂಜಾ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಸೂರ್ಯ ಅವರ ಎರಡು ವರ್ಷದ ಮಗು ಕೂಡ ಅವರೊಂದಿಗೆ ಇತ್ತು. ಬಂಧಿತ ಯುವಕರ ಮೇಲೆ ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ.




ಮಕ್ಕಳು, ಮಹಿಳೆಯರನ್ನು ಬಳಸಿಕೊಂಡು ಅನ್ಯ ರಾಜ್ಯಗಳಿಂದ ಗಾಂಜಾ ಸಾಗಾಟ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ. ಬಂಧಿತ ಆರೋಪಿಗಳು ಇಂಥದ್ದೇ ಹಲವು ಪ್ರಕರಣಗಳಲ್ಲಿ ಗಾಂಜಾ ಸಾಗಾಟದ ಆರೋಪ ಎದುರಿಸುತ್ತಿದ್ದಾರೆ.




ಜಾಲಿಟ್ರಿಪ್ ಮತ್ತು ತೀರ್ಥ ಯಾತ್ರೆ ಹೆಸರಿನಲ್ಲಿ ಈ ಗುಂಪು ಇಷ್ಟು ದಿನ ತಿರುಗಾಡುತ್ತಿತ್ತು. ಶಾಲಾ-ಕಾಲೇಜುಗಳನ್ನು ಟಾರ್ಗೆಟ್ ಮಾಡಿಕೊಂಡು ಜಿಲ್ಲೆಯ ವಿವಿಧ ಗುಂಪುಗಳಿಗೆ ಗಾಂಜಾ ವಿತರಿಸುತ್ತಿದ್ದರು.



ಉನ್ನಿಕೃಷ್ಣನ್ ಮತ್ತು ಆತನ ಪತ್ನಿ ರೈಲಿನಲ್ಲೂ ಗಾಂಜಾ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಾರಿ ವಿಷ್ಣು ಮತ್ತು ಆತನ ಪತ್ನಿ ಗಾಂಜಾ ಸಾಗಾಟದ ನೇತೃತ್ವ ವಹಿಸಿದ್ದರು. ಈ ಬಾರಿ ಬಾಡಿಗೆ ವಾಹನ ಮೂಲಕ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು.

Ads on article

Advertise in articles 1

advertising articles 2

Advertise under the article