
ಎಂದು ಕಂಡು ಕೇಳರಿಯದ ಆಕಾರದ ಮೊಟ್ಟೆ ಇಟ್ಟ ಕೋಳಿ: ಮೊಟ್ಟೆಯ ವೈರಲ್ ಫೋಟೋ ನೋಡಿ ನೆಟ್ಟಿಗರು ಶಾಕ್
Wednesday, March 9, 2022
ವಿಜಯವಾಡ: ಜಗತ್ತಿನಲ್ಲಿ ನಾವು ಏನೇನೋ ವಿಸ್ಮಯಗಳನ್ನು ನಾವು ನೋಡುತ್ತಿರುತ್ತೇವೆ. ಕೆಲವೊಂದು ಬಾರಿ ಇದರ ಹಿಂದಿನ ಗುಟ್ಟನ್ನು ವೈಜ್ಞಾನಿಕವಾಗಿಯೂ ಪತ್ತೆ ಮಾಡಲು ಸಾಧ್ಯವಿಲ್ಲ. ಅದೆಲ್ಲವೂ ಸೃಷ್ಟಿಯ ಕುತೂಹಲ ಎಂದು ನಾವು ತಿಳಿಯಬೇಕಷ್ಟೇ.
ಅದೇ ರೀತಿ ಇಲ್ಲೊಂದು ವಿಶಿಷ್ಟ ಮೊಟದಟೆಯೊಂದನ್ನು ಕೋಳಿಯೊಂದು ಇಟ್ಟಿದೆ. ಕೆಲವೊಂದು ಸಲ ಮೊಟ್ಟೆಗಳು ಊಹಿಸಿದಕ್ಕಿಂತ ದೊಡ್ಡದಾಗಿರುತ್ತವೆ. ಹಾಗೇ ಕೆಲವೊಂದು ಸಣ್ಣದಾಗಿಯು ಇರುತ್ತವೆ. ಏನೇ ಆದರೂ ಎಲ್ಲಾ ಮೊಟ್ಟೆಗಳು ದುಂಡಾಗಿರುತ್ತವೆ ಮತ್ತು ಸ್ವಲ್ಪ ಉದ್ದವಾಗಿರುತ್ತವೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮೊಟ್ಟೆ ಚಿತ್ರವನ್ನು ನೋಡಿದರೆ, ಈ ರೀತಿಯ ಮೊಟ್ಟೆಯೂ ಇರುತ್ತದೆಯೇ ಎಂದು ಎಲ್ಲರೂ ದಂಗಾಗುತ್ತಾರೆ.
ಹೌದು, ಕೋಳಿಯೊಂದು ವಿಚಿತ್ರ ಆಕಾರದ ಮೊಟ್ಟೆ ಇಟ್ಟಿರುವ ಪ್ರಸಂಗ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವಿಆರ್ ಪುರಂ ವಲಯದ ರಾಜುಪೇಟ ಕಾಲನಿಯಲ್ಲಿ ನಡೆದಿದೆ. ಇಲ್ಲಿನ ಮಂಜಪು ಸತ್ಯನಾರಾಯಣ ಎಂಬುವರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಕಳೆದ ಭಾನುವಾರ (ಮಾ.6) ಕೋಳಿಗಳು ಇಟ್ಟಿರುವ ಮೊಟ್ಟೆಯನ್ನು ಭಾನುವಾರ ತೆಗೆದುಕೊಳ್ಳಲು ಹೋದಾಗ ಒಂದು ವಿಚಿತ್ರ ಆಕಾರದ ಮೊಟ್ಟೆಯನ್ನು ಸತ್ಯನಾರಾಯಣ ನೋಡಿದ್ದಾರೆ. ಅದನ್ನು ನೋಡಿ ಒಂದು ಕ್ಷಣ ಅವರು ದಂಗಾಗಿದ್ದಾರೆ. ಇದೇನೋ ಮೊಟ್ಟೆಯೋ? ಅಥವಾ ಬೇರೆ ಏನಾದರೂ ಇರಬಹುದೇ ಎಂದು ಒಂದು ಕ್ಷಣಕ್ಕೆ ಸತ್ಯನಾರಾಯಣ ಗೊಂದಲಕ್ಕೆ ಒಳಗಾಗಿದ್ದರು. ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಮೊಟ್ಟೆ ಎಂಬುದು ಅವರಿಗೆ ಸ್ಪಷ್ಟವಾಗಿದೆ.
READ
- ಸಾಯುವಾಗ ಆಕೆಯ ಖಾತೆಯಲ್ಲಿ ಕೇವಲ 80ರೂ. ಮಾತ್ರವಿತ್ತು! ಸಂಬಳವೆಲ್ಲಾ ಆತನಿಗೆ ಕಳಿಸಿ ಉಪವಾಸ ಇರುತ್ತಿದ್ದಳು: ಕಣ್ಣೀರಿಟ್ಟ ಗುಪ್ತಚರ ಬ್ಯೂರೋ ಅಧಿಕಾರಿ ಮೇಘಾ ತಂದೆ
- ಈದ್ ಹಬ್ಬಕ್ಕೆ ಅತ್ತರ್ ಪರಿಮಳ- 1 ತಿಂಗಳು ಉಪವಾಸ ಆಚರಿಸಿದ ಮುಸ್ಲಿಮರಿಂದ ಅತ್ತರ್ ಖರೀದಿ! ( VIDEO NEWS)
- ಪಿಎಫ್ ಕ್ಲೈಮ್ ಪ್ರಕ್ರಿಯೆ ಇನ್ನಷ್ಟು ಸುಲಭ: ಕ್ಯಾನ್ಸೆಲ್ ಚೆಕ್ ಅಪ್ಲೋಡ್, ಬ್ಯಾಂಕ್ ಖಾತೆ ಪರಿಶೀಲನೆ ಇಲ್ಲವೇ ಇಲ್ಲ
ಈ ವಿಚಿತ್ರ ಆಕಾರದ ಮೊಟ್ಟೆಯ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಳಿಯು ಈ ರೀತಿ ವಿಚಿತ್ರ ಆಕಾರದ ಮೊಟ್ಟೆಗಳನ್ನು ಇಡಲು ಅನುವಂಶಿಕ ದೋಷಗಳು ಎಂದು ಕೆಲ ಪರಿಣಿತರು ಹೇಳಿದ್ದಾರೆ. ಆದರೂ ಇದೇ ಮೊದಲ ಬಾರಿಗೆ ಈ ರೀತಿಯ ಮೊಟ್ಟೆಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.