ಮೂತ್ರನಾಳದ ಸೋಂಕಿನ ಚಿಕಿತ್ಸೆಗೊಳಗಾದ ಮಹಿಳೆಯ ಎಕ್ಸ್ ರೆ ವರದಿ ನೋಡಿ ವೈದ್ಯರೇ ಶಾಕ್
Saturday, March 19, 2022
ನ್ಯೂಯಾರ್ಕ್: ಮೂತ್ರನಾಳದ ಸೋಂಕುಗೊಳಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿರುವ ಮಹಿಳೆಯೋರ್ವರ ಎಕ್ಸ್ರೇ ವರದಿಯನ್ನು ನೋಡಿ ವೈದ್ಯರೇ ಒಂದು ಕ್ಷಣ ಬೆಚ್ಚಿಬಿದ್ದ ಘಟನೆ ನ್ಯೂಯಾರ್ಕ್ನಲ್ಲಿದ ನಡೆದಿದೆ.
ಈ ಮಹಿಳೆಯ ಮೂತ್ರ ವಿಸರ್ಜನಾ ನಾಳದಲ್ಲಿ 8 ಸೆ.ಮೀ. ಉದ್ದದ ಬಾಟಲ್ ತುಣುಕೊಂದು ಪತ್ತೆಯಾಗಿದೆ. ಈ ಬಾಟಲಿ ಹೇಗೆ ಅಲ್ಲಿಗೆ ಹೋಗಿರುವ ಕತೆ ಕೇಳಿ ವೈದ್ಯರು ಶಾಕ್ ಗೊಳಗಿದ್ದಾರೆ.
45 ವರ್ಷದ ಮಹಿಳೆಯೋರ್ವರು ಕಳೆದ ನಾಲ್ಕು ವರ್ಷಗಳಿಂದ ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿದ್ದರು. ಮಹಿಳೆಗೆ ಯುಟಿಐ ಲಕ್ಷಣಗಳು ಕಂಡುಬಂದಿದ್ದು, ಮೂತ್ರ ಸೋರಿಕೆಯಿಂದ ಆಗಾಗ ಶೌಚಾಗೃಹಕ್ಕೆ ಹೋಗಬೇಕಾದ ಸಮಸ್ಯೆ ಎದುರಾಗಿತ್ತು. ಆದ್ದರಿಂದ ಮಹಿಳೆಯ ಮೂತ್ರಕೋಶವನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿ ದೊಡ್ಡ ಕಲ್ಲು ಹಾಗೂ ಗಾಜಿನ ತುಂಡೊಂದು ಕಂಡುಬಂದಿದೆ. 8 ಸೆಂ.ಮೀ. ಉದ್ದದ ಕಲ್ಲು ಮತ್ತು ಅದರ ಜೊತೆಗಿದ್ದ ಗಾಜನ್ನು ತೆಗೆಯಲಾಗಿದೆ. ಅಸಲಿಗೆ ಏನಾಯಿತೆಂದರೆ, ತನ್ನ ಲೈಂಗಿಕ ಆಸೆಯನ್ನು ತೃಪ್ತಿ ಪಡಿಸಿಕೊಳ್ಳಲು 4 ವರ್ಷಗಳ ಹಿಂದೆ ಈ ಮಹಿಳೆ ಒಂದು ಗಾಜಿನ ಲೋಟವನ್ನು ತನ್ನ ಯೋನಿಯ ಬದಲಿಗೆ ಮೂತ್ರನಾಳಕ್ಕೆ ತೂರಿಸಿದ್ದಳು. ಆದರೆ, ಅದು ದೇಹದ ಒಳಗೆ ಸೇರಿಕೊಂಡಿತ್ತು.
ಆರಂಭದಲ್ಲಿ ಈ ವಿಚಾರವನ್ನು ಹೇಳಿಕೊಳ್ಳಲು ನಾಚಿಕೆಯಾಗಿ ಮುಚ್ಚಿಟ್ಟಿದ್ದಳು. ಆದರೆ, ಇದೀಗ ಮೂತ್ರನಾಳದ ಸೋಂಕಿಗೆ ಗುರಿಯಾಗಿರುವ ಪರಿಣಾಮ ಅನಿವಾರ್ಯವಾಗಿ ಆಕೆ ಆಸ್ಪತ್ರೆಯ ಬಾಗಿಲು ತಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಅಂತಿಮವಾಗಿ ಮಹಿಳೆಯು ಕಲ್ಲು ಮತ್ತು ಗಾಜನ್ನು ತೆಗೆದುಹಾಕಲು ಸಿಸ್ಟೊಲಿಥೊಟೊಮಿ ಎಂಬ ತೆರೆದ ಶಸ್ತ್ರಚಿಕಿತ್ಸೆಯನ್ನು ಎದುರಿಸಿದ್ದಾರೆ. ಅದೃಷ್ಟವಶಾತ್ ಮಹಿಳೆಗೆ ರಕ್ತಸ್ರಾವದಂತಹ ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ವೈದ್ಯರು. ಆಗಾಗ ಮೂಡ್ ಸ್ವಿಂಗ್‌ಗಳಂತಹ ರೋಗಲಕ್ಷಣಗಳನ್ನು ಹೊರತುಪಡಿಸಿ ತನಗೆ ಬೇರೆ ಯಾವುದೇ ಸಮಸ್ಯೆಗಳು ಇರಲಿಲ್ಲ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ.