
'ಗಂಗೂಬಾಯಿ' ಸಿನಿಮಾದಲ್ಲಿ ವೇಶ್ಯೆಯಾಗಲು ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತೇ?
Wednesday, March 2, 2022
ಮುಂಬೈ: ಆಲಿಯಾ ಭಟ್, ಶಂತನು ಹಾಗೂ ಅಜಯ್ ದೇವಗನ್ ಅಭಿನಯಿಸಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾವು ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿತ್ತು. ಬಾಂಬೆ ರೆಡ್ಲೈಟ್ ಏರಿಯಾ ಕಾಮಾಟಿಪುರದ ಬಗ್ಗೆ ಜನರಿಗೆ ಕೆಟ್ಟ ಭಾವನೆ ಮೂಡುತ್ತದೆ ಎಂದು ಈ ಸಿನಿಮಾದ ವಿರುದ್ಧ ಕಾಮಾಟಿಪುರದ ನಿವಾಸಿಗಳು ಸಿಡಿದೆದ್ದಿದ್ದರು. ಆದರೆ ಇದೀಗ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದೆ. ಕೇವಲ ಭಾರತದಲ್ಲಷ್ಟೇ ಅಲ್ಲದೆ ಈ ಸಿನಿಮಾ ವಿದೇಶದಲ್ಲೂ ಸಖತ್ ಸದ್ದು ಮಾಡುತ್ತಿದೆ.
ಕಾಮಾಟಿಪುರದಲ್ಲಿ ಬಹಳ ಹಿಂದೆ ವೇಶ್ಯೆಯಾಗಿದ್ದ ಗಂಗೂಬಾಯಿಯ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ. ಸತ್ಯ ಕತೆಯೊಂದಕ್ಕೆ ಕಾಲ್ಪನಿಕತೆಯನ್ನು ಬೆರೆಸಿರುವ ಈ ಸಿನಿಮಾದಲ್ಲಿ ನಟ ಅಜಯ್ ದೇವಗನ್ ಮುಂಬೈನ ಮಾಫಿಯಾ ಡಾನ್ ರಹೀಮ್ ಲಾಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಹೀಮ್ ಲಾಲನೇ ಗಂಗೂಬಾಯಿಯನ್ನು ವೇಶ್ಯಾವೃತ್ತಿಗೆ ಕರೆತಂದಿದ್ದು. ಅಂದಹಾಗೆ ‘ಗಂಗೂಬಾಯಿ’ ಪಾತ್ರಕ್ಕೆ ಆಲಿಯಾ ಭಟ್ ತೆಗೆದುಕೊಂಡಿರುವ ಸಂಭಾವನೆ ಕೂಡ ಸಿನಿಮಾದಂತೆಯ ಭಾರಿ ಸದ್ದು ಮಾಡುತ್ತಿದೆ.
ಇದಕ್ಕೆ ಕಾರಣವೆಂದರೆ, ಆಲಿಯಾ ಭಟ್ ಈ ಸಿನಿಮಾಕ್ಕೆ ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. 100 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ 20 ಕೋಟಿ ರೂ. ಆಲಿಯಾ ಪಾಲಾಗಿದೆ. ಅದೇ ರೀತಿ ಅಜಯ್ ದೇವಗನ್ ಪಾತ್ರ ಚಿಕ್ಕದಾದರೂ ಅವರೂ ಸಂಭಾವನೆ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ ಅಜಯ್ ದೇವಗನ್ ರಹೀಮ್ ಲಾಲ್ ಪಾತ್ರಕ್ಕೆ 12 ಕೋಟಿ ರೂ. ಪಡೆದಿದ್ದಾರಂತೆ.
ಆದರೆ ಹೋಲಿಸಿದರೆ ಆಲಿಯಾ ಭಟ್ ಪಡೆದಿರುವ ಸಂಭಾವನೆ ಕಡಿಮೆ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ ಇದು ಆಲಿಯಾ ಭಟ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೋಡಿಯ ಪ್ರಥಮ ಸಿನಿಮಾ. ತಮ್ಮ ಒಂಬತ್ತನೇ ವಯಸ್ಸಿನಿಂದ ಬನ್ಸಾಲಿ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತು ಎಂದು ಆಲಿಯಾ ಭಟ್ ಹೇಳಿಕೊಂಡಿದ್ದಾರೆ.