ಕೈದಿಯೊಬ್ಬ ಜೈಲು ಕಂಬಿಯೊಳಗಿನಿಂದ ತೂರಿ ತಪ್ಪಿಸಿಕೊಂಡ: ಈತನ ಕರಾಮತ್ತು ನೋಡಿ ಪೊಲೀಸರೇ ದಂಗಾಗಿಬಿಟ್ರು
Wednesday, March 23, 2022
ಪುಣೆ(ಮಹಾರಾಷ್ಟ್ರ): ಜೈಲಿನಿಂದ ತಪ್ಪಿಸಿಕೊಂಡು ಹೊರಬರುವುದು ಅಷ್ಟೇನು ಸುಲಭದ ಮಾತಲ್ಲ. ಅದರೂ ಕೆಲವೊಬ್ಬ ಕೈದಿಗಳು ಅಲ್ಲಿಂದ ಪಲಾಯನ ಮಾಡಲು ಏನೆಲ್ಲಾ ಕಸರತ್ತು ಮಾಡುತ್ತಾರೆ ಗೊತ್ತೇ?. ಇಲ್ಲೊಬ್ಬ ಕೈದಿ ಜೈಲು ಕಂಬಿಯೊಳಗಿನಿಂದಲೇ ಅತಿ ಸುಲಭವಾಗಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈತ ತಪ್ಪಿಸಿಕೊಂಡ ಪರಿಯ ಕಂಡು ಪೊಲೀಸರೇ ಅರೆಕ್ಷಣ ದಂಗಾಗಿದ್ದಾರೆ.
ಈ ಖದೀಮ ಕೈದಿ ಮಹಾರಾಷ್ಟ್ರದ ಪುಣೆ ಜೈಲಿನಿಂದ ಪರಾರಿಯಾಗಿದ್ದಾನೆ. ಕಳವುಗೈದ ಆರೋಪದ ಮೇಲೆ ಈ ಕೈದಿ ಜೈಲು ಕಂಬಿ ಎಣಿಸುತ್ತಿದ್ದ. ಆದರೆ ಈತ ಯಾವುದೇ ಸಲಕರಣೆಗಳನ್ನೂ ಬಳಸದೇ ಜೈಲು ಕಂಬಿಯೊಳಗಿಂದ ನುಸುಳಿ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಹಿಡಿದು ಮತ್ತೆ ಜೈಲು ಕಂಬಿಯೊಳಗೆ ಬಂಧಿಸಿದ್ದಾರೆ.
ಆದರೆ ಈತ ತಪ್ಪಿಸಿಕೊಂಡಿದ್ದು ಹೇಗೆ ಎಂಬುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಇದನ್ನು ತಿಳಿಯಲು ಪೊಲೀಸರು ಮತ್ತೆ ಆ ಕಳ್ಳನನ್ನು ಅದೇ ಜೈಲು ಕೋಣೆಗೆ ಹಾಕಿ ತಪ್ಪಿಸಿಕೊಂಡ ಬಗ್ಗೆ ತೋರಿಸಲು ಪೊಲೀಸರು ಕೇಳಿದಾಗ ಆ ಕಳ್ಳ, ಜೈಲಿನ ಕಂಬಿಗಳ ಮಧ್ಯೆ ಸರಳವಾಗಿ ತೂರಿ ಬಂದಿದ್ದಾನೆ. ಇದನ್ನು ವೀಡಿಯೋ ಮಾಡಿರುವ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೋಗ ಈ ವೀಡಿಯೋ ಭಾರೀ ವೈರಲ್ ಆಗಿದೆ.
ಇಷ್ಟಾದ ಬಳಿಕ ಪೊಲೀಸರಿಗೆ ಜೈಲಿನ ಭದ್ರತೆಯ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿದೆ. ಕಳ್ಳರು ಗೋಡೆ ಕೊರೆದು, ಗುಂಡಿ ತೋಡಿಯೋ ಪರಾರಿಯಾಗಿದ್ದು ನೋಡಿರು ಪೊಲೀಸರಿಗೆ ಈ ಕಳ್ಳನ ಕರಾಮತ್ತು ಮತ್ತು ಭದ್ರತಾ ವೈಫಲ್ಯದ ಬಗ್ಗೆ ಚಿಂತೆ ಶುರುವಾಗಿದೆಯಂತೆ. ಸರಳುಗಳ ಮಧ್ಯೆಯೇ ತೂರಿ ಬಂದು ತಪ್ಪಿಸಿಕೊಂಡ ಬಳಿಕ ಆ ಜೈಲಿಗೆ ಭದ್ರತೆ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆಯಂತೆ.