Job in Apex Bank- ಅಪೆಕ್ಸ್ ಬ್ಯಾಂಕಿನಲ್ಲಿ ಉದ್ಯೋಗಾವಕಾಶ: ಇಲ್ಲಿದೆ ಹೆಚ್ಚಿನ ಮಾಹಿತಿ
ಅಪೆಕ್ಸ್ ಬ್ಯಾಂಕಿನಲ್ಲಿ ಉದ್ಯೋಗಾವಕಾಶ: ಇಲ್ಲಿದೆ ಹೆಚ್ಚಿನ ಮಾಹಿತಿ
ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಬೆಂಗಳೂರು ಇಲ್ಲಿ ಖಾಲಿ ಇರುವ ಬ್ಯಾಂಕ್ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಅವಕಾಶ ಇರುವುದಿಲ್ಲ
ಹುದ್ದೆಗಳ ವಿವರ ಹೀಗಿದೆ
ಸಂಸ್ಥೆ: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ
ಹುದ್ದೆಯ ಹೆಸರು: ಬ್ಯಾಂಕ್ ಸಹಾಯಕರು
ಒಟ್ಟು ಹುದ್ದೆಗಳು: 79
ವೇತನ ಶ್ರೇಣಿ 22625/- 85125/-
ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸಲು ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಪರೀಕ್ಷೆಯಲ್ಲಿ ಭಾಷಾ ವಿಷಯಗಳು ಸೇರಿದಂತೆ ಕ್ರೋಢೀಕೃತ ಶೇಕಡ 60ರಷ್ಟು ಅಂಕ ಪಡೆದಿರಬೇಕು. ಅಭ್ಯರ್ಥಿಗಳು ಕನ್ನಡವನ್ನು ಓದುವ, ಬರೆಯುವ ಮತ್ತು ಸುಲಲಿತವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು
ಒಟ್ಟು ಹುದ್ದೆಗಳ ಸಂಖ್ಯೆ 79 ಇರುತ್ತದೆ. ನೇಮಕ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸುವ ಯಾ ಕಡಿಮೆ ಮಾಡುವ ಅಧಿಕಾರವನ್ನು ಬ್ಯಾಂಕ್ ಹೊಂದಿದೆ
ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ (ನಿಯಮಾನುಸಾರ ಸಡಿಲಿಕೆ ಇರುತ್ತದೆ)
ಅರ್ಜಿ ಸಲ್ಲಿಸುವ ವಿಧಾನ ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಬ್ಯಾಂಕಿನ ವೆಬ್ಸೈಟ್ ಮೂಲಕ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮುನ್ನ ಪ್ರಕಟಣೆಯನ್ನು ಓದಿ ಅದರಲ್ಲಿರುವ ಅಗತ್ಯ ಮಾರ್ಗದರ್ಶನವನ್ನು ವೆಬ್ಸೈಟ್ನಲ್ಲಿ ಪಡೆದುಕೊಳ್ಳ ತಕ್ಕದ್ದು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 17 3 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 04 2022
ಒಬ್ಬ ಅಭ್ಯರ್ಥಿಗೆ ಕೇವಲ ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲೆ ಇಟ್ಟು ಅದರ ಕೆಳಗೆ ಕಪ್ಪು ಶಾಯಿಯ ನನ್ನಲ್ಲಿ ಸಹಿಮಾಡಿ ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಭಾವಚಿತ್ರ ಮತ್ತು ಸಹಿ ಇಲ್ಲದೆ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
Web Site: https://www.karnatakaapex.com/