Job in Co-op Society- ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗವಕಾಶ
ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗವಕಾಶ
ಮಂಗಳೂರಿನ ಪ್ರತಿಷ್ಟಿತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರಲ್ಲಿ ಉದ್ಯೋಗವಕಾಶ ಲಭ್ಯವಾಗಿದೆ. ಸೊಸೈಟಿಯು ಅರ್ಹ ಅಭ್ಯರ್ಥಿಗಳಿಂದ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಬಯಸಿ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಆಹ್ವಾನಿಸಲಾದ ಹುದ್ದೆಯ ಪದನಾಮ, ಖಾಲಿ ಇರುವ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ ಮತ್ತು ಮೀಸಲಾತಿ ಈ ಕೆಳಗಿನಂತಿವೆ
ಒಟ್ಟು ಹುದ್ದೆಗಳು : 20 ಹುದ್ದೆಗಳು
ಅಕೌಂಟೆಡ್ : 2 ಹುದ್ದೆಗಳು (ಸಾಮಾನ್ಯ 2)
ಕ್ಲರ್ಕ್ : 12 ಹುದ್ದೆಗಳು (ಸಾಮಾನ್ಯ 12)
ಅಟೆಂಡರ್ : 6 ಹುದ್ದೆಗಳು (ಸಾಮಾನ್ಯ 3, ಹಿಂದುಳಿದ ಜಾತಿಗೆ 1, ಪರಿಶಿಷ್ಟ ಜಾತಿ ಮತ್ತು
ಪಂಗಡಕ್ಕೆ ತಲಾ ಒಂದೊಂದು)
ಶೈಕ್ಷಣಿಕ ಅರ್ಹತೆ:
ಅಕೌಂಟೆಡ್ : BCom/BBM/BBA ಅಥವಾ MCom/MBA
ಕ್ಲರ್ಕ್ : ಯಾವುದೇ ಪದವಿ
ಅಟೆಂಡರ್ : SSLC ಪಾಸ್ ಆಗಿರಬೇಕು. (ಪದವೀಧರರಿಗೆ ಆದ್ಯತೆ ನೀಡಲಾಗುವುದು)
ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿಗಳ ವಿತರಣೆಯನ್ನು ಮಾರ್ಚ್ 14, 2022 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇರುವ ಸಂಘದ 25 ಶಾಖೆಗಳಲ್ಲಿ ನೀಡಲಾಗುವುದು.
ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಹಾಕಬಯಸುವವರು ಆಯಾಯ ಹುದ್ದೆಗೆ ನಿಗದಿತ ನಮೂನೆಯಲ್ಲಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು
ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 31 .3 .2022