Life saver Apple Watch!- ಜೀವ ಉಳಿಸಿತು ಆಪಲ್ ವಾಚ್: ಹೇಗೆ ಗೊತ್ತೇ..?
ಜೀವ ಉಳಿಸಿತು ಆಪಲ್ ವಾಚ್: ಹೇಗೆ ಗೊತ್ತೇ..?
ಆತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಮನುಷ್ಯನ ಪ್ರತಿಯೊಂದು ಕಾರ್ಯದಲ್ಲೂ ಜತೆಯಾಗಿ ನಿಲ್ಲಬಲ್ಲ ಲಕ್ಷಾಂತರ ಸಾಧನಗಳು ಈಗ ಎಲ್ಲೆಡೆ ಲಭ್ಯವಿವೆ. ಈ ಪೈಕಿ ಕೆಲವು ಮಾನವನ ಅಸ್ತಿತ್ವಕ್ಕೆ ಅಪಾಯಕಾರಿ.. ಇನ್ನು ಕೆಲವು ಮನುಷ್ಯರ ದಿನನಿತ್ಯದ ಜೀವನಕ್ಕೆ ಸಹಕಾರಿ.
ಇದಕ್ಕೆ ಪೂರಕ ಎಂಬಂತೆ, ಆಪಲ್ ವಾಚೊಂದು ಮನುಷ್ಯನ ಜೀವ ಉಳಿಸಿದ ಪ್ರಸಂಗವೊಂದು ನಡೆದಿದೆ. ಈ ರೋಚಕ ಘಟನೆ ನಡೆಸಿದಿರುವುದು ಹರ್ಯಾಣದಲ್ಲಿ. ತನ್ನ ವಿಶಿಷ್ಟ ತಂತ್ರಜ್ಞಾನದ ಮೂಲಕ ಖ್ಯಾತಿ ಗಳಿಸಿರುವ ಆಪಲ್ ಸಾಧನ ಹರಿಯಾಣದ ವ್ಯಕ್ತಿಯೊಬ್ಬರ ಜೀವ ಉಳಿಸಿದೆ.
ಇಲ್ಲಿನ ಪಟ್ಟಣವೊಂದರ ನಿವಾಸಿಯಾದ ನಿತೇಶ್ ಚೋಪ್ರಾ (34) ಅಸೌಖ್ಯದಿಂದ ಬಳಲುತ್ತಿದ್ದರು. ಅವರಿಗೆ ಕಡಿಮೆ ರಕ್ತದೊತ್ತಡ ಮತ್ತು ಎದೆನೋವಿನಿಂದ ಅಸ್ವಸ್ಥರಾಗಿದ್ದರು. ಇದಕ್ಕಾಗಿ ಅವರ ಪತ್ನಿ ನೇಹಾ ತನ್ನ ಪತಿಯ ಆರೋಗ್ಯದ ಸರಿಯಾದ ಮಾಹಿತಿ ತಿಳಿದುಕೊಳ್ಳಲು ನಿತೀಶ್ಗೆ ಕಳೆದ ವರ್ಷ ಆಪಲ್ ವಾಚನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ನಿತೀಶ್ ತನ್ನ ಕೈಗೆ ಹಾಕಿ ಬಳಸುತ್ತಿದ್ದರು.
ಅನಾರೋಗ್ಯದಿಂದ ಇದ್ದ ನಿತೀಶ್ ಅವರಿಗೆ ತಮ್ಮ ದಿನನಿತ್ಯದ ಆರೋಗ್ಯದ ಮಾಹಿತಿಯನ್ನು ಈ ವಾಚ್ ನೀಡುತ್ತಿತ್ತು. ಇತ್ತೀಚೆಗೆ ಇಸಿಜಿ ಮಾಹಿತಿಯನ್ನು ಆಪಲ್ ವಾಚ್ ನೀಡಿದೆ, ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂಬ ಸೂಚನೆಯನ್ನು ನೀಡಿದೆ.
ಆಪಲ್ ವಾಚ್ ನಿತೀಶ್ಗಾದ ಆರೋಗ್ಯದ ಕುರಿತಾದ ಸರಿಯಾದ ಮಾಹಿತಿಯನ್ನು ಆಪಲ್ ವಾಚ್ ನೀಡುತ್ತಿದ್ದಂತೆಯೇ ನಿತೀಶ್ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಆಂಜಿಯೋಗ್ರಫಿ ಮಾಡಿದ ನಂತರ, ನಿತೇಶ್ ಅವರ ಅಪಧಮನಿಗಳಲ್ಲಿ 99.9 ಪ್ರತಿಶತದಷ್ಟು ತೊಂದರೆ ಕಾಣಿಸಿದೆ ಎಂದು ಗೊತ್ತಾಗಿದೆ.
ಬಳಿಕ ಚೇತರಿಸಿಕೊಂಡಿರುವ ನಿತೇಶ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಪಲ್ ವಾಚ್ ಈ ರೀತಿಯ ಗಂಭೀರ ವಿಷಯದ ಬಗ್ಗೆ ಎಚ್ಚರಿಸುವ ಸಾಮರ್ಥ್ಯದಿಂದ ಪ್ರೇರೇಪಿಸಲ್ಪಟ್ಟ ನೇಹಾ ಆಪಲ್ ಸಿಇಒ ಟಿಮ್ ಕುಕ್‌ಗೆ ಇಮೇಲ್ ಬರೆದು ವಾಚ್ ತನ್ನ ಪತಿಯ ಜೀವ ಉಳಿಸಿತು ಎಂದು ಧನ್ಯವಾದ ಸಮರ್ಪಿಸಿದರು.