
ಬೆತ್ತಲೆ ದೇಹ ಪ್ರದರ್ಶಿಸಲು ಹೇಳಿದ ನೆಟ್ಟಿಗನಿಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟ ನಟಿ ಯಶಿಕಾ ಆನಂದ್
Wednesday, March 9, 2022
ಚೆನ್ನೈ: ತಮಿಳಿನ ವಯಸ್ಕರ ಹಾಸ್ಯ ಸಿನಿಮಾ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹಾಗೂ ಬಿಗ್ಬಾಸ್ ಶೋ ಮೂಲಕ ಖ್ಯಾತಿ ಹೊಂದಿರುವ ನಟಿ ಯಶಿಕಾ ಆನಂದ್ ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇದೀಗ ಚೇತರಿಸಿಕೊಂಡಿದ್ದಾರೆ. ಸದ್ಯ ಸಹಜ ಜೀವನಕ್ಕೆ ಮರಳಿದ್ದಾರೆ.
ಅಪಘಾತದ ಬಳಿಕ ಯಶಿಕಾ ಆನಂದ್ ಅನೇಕ ಸರ್ಜರಿಗೆ ಒಳಗಾಗಿದ್ದರು. ಸದ್ಯ ಸಹಜ ಸ್ಥಿತಿಗೆ ಮರಳಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಇದೀಗ ಸೂಕ್ಷ್ಮತೆ ಅರಿಯದ ನೆಟ್ಟಿಗನೊಬ್ಬ ಇನ್ಸ್ಟಾಗ್ರಾಂನಲ್ಲಿ ಲೈವ್ ನಲ್ಲಿ 'ನಿಮ್ಮ ಬೆತ್ತಲೆ ದೇಹವನ್ನು ಪ್ರದರ್ಶಿಸಬಹುದೇ' ಎಂದು ಕೇಳಿದ್ದಾನೆ. ಇದಕ್ಕೆ ಆತ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ನೀಡಿರುವ ಯಶಿಕಾ, 'ನನ್ನ ತಲೆಗೂದಲನ್ನು ತೋರಿಸಿ ಮಾತನಾಡುತ್ತೇನೆ ಏಕೆಂದರೆ ಅದು ಕೂಡ ನನ್ನ ದೇಹದ ಭಾಗ. ಆದರೆ ನನ್ನ ಮುಖವನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ' ಎಂದಿದ್ದಾರೆ.
ಬಿಸ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾರಣ ನೀಡಿದ ಯಶಿಕಾ ಆನಂದ್, ಇತ್ತೀಚಿಗೆ ಕಾರು ಅಪಘಾತದಿಂದಾಗಿ ಹಿಂದಿನಂತೆ ಟಾಸ್ಕ್‌ಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಮತ್ತೊಂದು ಲವ್ ಟ್ರ್ಯಾಕ್‌ಗೆ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ. ನಿರೂಪ್ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗಪಡಿಸಿದ ಅವರು, “ನಾನು ನಿರೂಪ್‌ನೊಂದಿಗೆ ಬೇರ್ಪಡುವ ಮೊದಲು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಮತ್ತು ಆತ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಯಶಿಕಾ ಆನಂದ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲೂ ಅವರಿಗೆ ಆಗುತ್ತಿರಲಿಲ್ಲ. ಈ ಅಪಘಾತದಲ್ಲಿ ಯಶಿಕಾ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.