
Mangalore-16 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಬೆದರಿಸಿ ಗುಡ್ಡದಲ್ಲಿ ಕಿಸ್ ಮಾಡಿದ ಯುವಕ ಅಂದರ್!
Saturday, March 5, 2022
ಮಂಗಳೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಗುಡ್ಡಕ್ಕೆ ಕರೆದೊಯ್ದು ಕಿಸ್ ಮಾಡಿರುವ ಕಾಮುಕ ಯುವಕನನ್ನು ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ 16 ವರ್ಷದ ಬಾಲಕಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಹಾಸ್ಟೆಲ್ ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆಯನ್ನು ಸುಳ್ಯ ಐವರ್ನಾಡು ಗ್ರಾಮದ ರಕ್ಷಿತ್ ಎಂಬಾತನು ಪ್ರೀತಿಸುತ್ತಿದ್ದ. ಈ ಬಗ್ಗೆ ಅಪ್ರಾಪ್ತ ಬಾಲಕಿಯ ಮನೆಯವರಿಗೆ ತಿಳಿದು ಆತನಿಗೆ ಬುದ್ಧಿವಾದ ಹೇಳಿ ಆಕೆಯನ್ನು ಮಾತನಾಡಿಸದಂತೆ ತಿಳಿ ಹೇಳಿದ್ದಾರೆ. ಅಲ್ಲದೆ ರಕ್ಷಿತ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿರುತ್ತು.
ಆದರೆ ರಕ್ಷಿತ್ ಹಾಸ್ಟೆಲ್ ವಾರ್ಡನ್ ಗೆ ತಾನು ಬಾಲಕಿಯ ಅಣ್ಣನೆಂದು ಸುಳ್ಳು ಹೇಳಿ ಆಕೆಯ ಫೋನ್ ನಂಬರ್ ಪಡೆದಿದ್ದಾನೆ. ಆ ಬಳಿಕ ಆಕೆಗೆ ಕರೆ ಮಾಡಿ ಹೊರಗಡೆ ಎಲ್ಲಾದರೂ ಭೇಟಿಯಾಗುವಂತೆ ತಿಳಿಸಿದ್ದಾನೆ. ಆಗ ಬಾಲಕಿ ತಾನು ಬರುವುದಿಲ್ಲವೆಂದು ಹೇಳಿದ್ದಾಳೆ. ಆಗ ರಕ್ಷಿತ್ 'ನೀನು ಬಾರದಿದ್ದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ'. ಪರಿಣಾಮ ಬಾಲಕಿ ಆತ ಹೇಳಿದಂತೆ 2022ರ ಫೆ.27ರಂದು ಬೀರಮಲೆಗುಡ್ಡೆಗೆ ಹೋಗಿದ್ದಾಳೆ.
ಬೀರಮಲೆಗುಡ್ಡೆಗೆ ಹೋಗಿದ್ದ ಸಂದರ್ಭ ಆರೋಪಿ ರಕ್ಷಿತ್ ಆಕೆಯನ್ನು ಬಲವಂತದಿಂದ ಅಪ್ಪಿಹಿಡಿದು ಕಿಸ್ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಜಿ ಆತನಿಂದ ತಪ್ಪಿಸಿಕೊಂಡು ಹಾಸ್ಟೆಲ್ ಗೆ ಬಂದಿದ್ದಾಳೆ. ಆ ಬಳಿಕ ರಕ್ಷಿತ್ ಲೈಂಗಿಕ ಕಿರುಕುಳ ನೀಡಿರುವುದು ಆಕೆಯ ಮನೆಯರಿಗೆ ತಿಳಿದು ಪೊಲೀಸ್ ದೂರು ದಾಖಲಿಸಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಕ್ಷಿತ್ ನನ್ನು ದಸ್ತಗಿರಿ ಮಾಡಿ, ತನಿಖೆ ನಡೆಸುತ್ತಿದ್ದಾರೆ.