
ಉಕ್ರೇನ್ ಯುದ್ಧದ ಮಧ್ಯೆಯೇ ರಷ್ಯಾದ ಯುವತಿಗೆ ಭಾರತದ ಯುವಕನೊಂದಿಗೆ ಮದುವೆ!
Sunday, March 6, 2022
ಇಂದೋರ್ (ಮಧ್ಯಪ್ರದೇಶ): ರಷ್ಯಾ- ಯುಕ್ರೇನ್ ಮೇಲೆ ಸಮರ ನಡೆಸುತ್ತಿದೆ. ಈ ಯುದ್ಧದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಮಂದಿ ತಾಯ್ನಾಡಿಗೆ ವಾಪಸಾಗಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳ ಮಧ್ಯೆಯೇ ರಷ್ಯಾಯದ ಯುವತಿಯೊಬ್ಬಳು ಭಾರತೀಯ ಯುವಕನನ್ನು ವಿವಾಹವಾಗಿ ಭಾರಿ ಸುದ್ದಿಯಲ್ಲಿದ್ದಾಳೆ.
ರಷ್ಯಾದ ಲೀನಾ ಬಾರ್ಕೋಲ್ಟೆಸಿವ್ ಭಾರತೀಯ ಯುವಕನನ್ನು ವಿವಾಹವಾಗಿ ಸುದ್ದಿಯಲ್ಲಿರುವಾಕೆ. ಈಕೆ ಮಧ್ಯಪ್ರದೇಶದ ಇಂದೋರ್ನ ಸಪ್ತಶೃಂಗಿ ನಗರದ ನಿವಾಸಿ, ಹೈದರಾಬಾದ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಯುವಕ ರಿಷಿ ವರ್ಮಾ ವಿವಾಹವಾಹಿದ್ದಾಳೆ. ಇವರಿಬ್ಬರ ನಡುವೆ ಪ್ರೀತಿ ಮೊಳೆತದ್ದೇ ವಿಚಿತ್ರ ಕ್ಷಣದಲ್ಲಿ. ರಿಷಿ ವರ್ಮಾ 2019ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಪ್ರವಾಸಕ್ಕೆ ಹೋಗಿದ್ದರು. ಈ ಸಂದರ್ಭ ಲೀನಾ ಫೋಟೋ ಕ್ಲಿಕ್ಕಿಸಲೆಂದು ರಿಷಿಯವರನ್ನು ಕರೆದರು. ಹೀಗೆ ಬೇರೆ ಬೇರೆ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸುವಾಗಲೇ ಇಬ್ಬರ ನಡುವೆ ಮಾತುಕತೆ ಆರಂಭವಾಗಿದೆ. ಆ ಬಳಿಕ ಸ್ನೇಹವೂ ಆಗಿ, ಪ್ರೇಮಕ್ಕೆ ತಿರುಗಿದೆ.
ಅಲ್ಲಿಂದಲೇ ಫೋನ್ ನಂಬರ್ ವಿನಿಮಯವಾಗಿ ಈ ಪ್ರೇಮಕಥೆ ಮದುವೆಯಾಗುವವರೆಗೆ ಬಂದಿದೆ. ಮೊದಲು ರಿಷಿ ಇಟ್ಟ ಪ್ರಪೋಸಲ್‌ಗೆ ಲೀನಾ ಒಪ್ಪಿಕೊಂಡಿದ್ದಾರೆ. ಆಗ ಕೊರೊನಾ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ಇದೀಗ ಇಬ್ಬರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅಂದಹಾಗೆ ರಷ್ಯಾ ಮೂಲದ ಲೀನಾಗೆ ಭಾರತೀಯ ಆಹಾರ ಅಂದರೆ ತುಂಬಾ ಪ್ರೀತಿಯಂತೆ. ಅವರು ದೇವಸ್ಥಾನಗಳಿಗೂ ಹೋಗುತ್ತಾರೆ. ಭಾರತೀಯ ಆಹಾರ ಮತ್ತು ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ ಎನ್ನುತ್ತಾರೆ.