
ಒಂದು ಮದುವೆಗೆ ಹೆಣ್ಣು ಸಿಗದ ಕಾಲದಲ್ಲಿ ತ್ರಿವಳಿ ಸೋದರಿಯರನ್ನು ವಿವಾಹವಾದ ಯುವಕ!
Wednesday, March 9, 2022
ಕಾಂಗೋ: ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ ಎಂದು ಕೆಲ ಯುವಕರು ಗೋಳಾಡುತ್ತಿದ್ದರೆ, ಇನ್ನೊಂದೆಡೆ ಹಲವು ಯುವಕರು ಒಂದಕ್ಕಿಂತ ಹೆಚ್ಚು ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಿ ಮದುವೆಯಾಗುತ್ತಿರುವ ಬಗ್ಗೆಯೂ ವರದಿಗಳು ಆಗುತ್ತಲೇ ಇವೆ. ಅದೇ ರೀತಿ ಇಲ್ಲೊಬ್ಬ ಒಬ್ಬನೇ ಯುವಕ ಏಕಕಾಲದಲ್ಲಿ ಮೂವರು ಯುವತಿಯರನ್ನು ಮದುವೆಯಾಗಿದ್ದಾನೆ. ಹಾಗೆಂದು ಇದೇನು ಮೋಸದ ಮದುವೆಯಲ್ಲ, ಬದಲಿಗೆ ಯುವತಿಯರು ಖುಷಿಯಿಂದಲೇ ಆತನನ್ನು ಒಪ್ಪಿ ಮದುವೆಯಾಗಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಕಾಂಗೋದಲ್ಲಿ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ 32 ವರ್ಷ ವಯಸ್ಸಿನ ಯುವಕ ಲುವಿಜೋ ಎಂಬವನು ಮೂವರು ಯುವತಿಯರನ್ನು ಮದುವೆಯಾಗಿದ್ದಾನೆ. ಈ ಮೂವರು ಯುವತಿಯರ ಹೆಸರು ನಡೆಗೆ, ನತಾಶಾ ಮತ್ತು ನಟಾಲಿ. ಮತ್ತೂ ಒಂದು ವಿಶೇಷವೆಂದರೆ ಈ ಮೂವರೂ ತ್ರಿವಳಿಗಳು ಎನ್ನುವುದು ವಿಶೇಷ.
ಅಷ್ಟಕ್ಕೂ ಲುವಿಜೋ ಯಾವುದೇ ಕಾನೂನು ಮೀರಿ ಮದುವೆಯಾಗಿಲ್ಲ. ಏಕೆಂದರೆ ಕಾಂಗೊದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೇ ಈ ಮೂವರು ಸಹೋದರಿಯರು ಓರ್ವನನ್ನೇ ವಿವಾಹವಾಗುವ ಹಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಮೂವರು ಲುವಿಜೋನಿಗೆ ಮನಸೋತ ಹಿನ್ನೆಲೆಯಲ್ಲಿ ಎಲ್ಲರನ್ನೂ ಆತ ಮದುವೆಯಾಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲುವಿಜೋ ‘ತನಗೇನು ಮೂರು ಮದುವೆ ಇಷ್ಟವಿರಲಿಲ್ಲ. ಆದರೆ ಈ ತ್ರಿವಳಿ ಸಹೋದರಿಯರು ಬಂದು ಪ್ರಪೋಸ್ ಮಾಡಿದಾಗ ಅವರ ಮನಸ್ಸನ್ನು ನೋಯಿಸಲು ಆಗಲಿಲ್ಲ. ಎಲ್ಲರೂ ನನ್ನನ್ನೇ ಮದುವೆಯಾಗುವ ಹಂಬಲ ವ್ಯಕ್ತಪಡಿಸಿದ್ದರಿಂದ ನಾನೂ ಒಪ್ಪಿಕೊಂಡೆ’ ಎಂದಿದ್ದಾನೆ ಲುವಿಜೋ.
"ಮೊದಲಿಗೆ ತಾನಯ ನಟಾಲಿಯಾಳನ್ನು ಪ್ರೀತಿಸಿದ್ದೆ. ಆ ಬಳಿಕ ಆಕೆ ತನ್ನ ಇಬ್ಬರು ಸಹೋದರಿಯರ ಬಗ್ಗೆ ಹೇಳಿದಾಗ ಅವರೂ ಒಪ್ಪಿದರು. ಅವರ ಈ ಪ್ರಪೋಸ್ ಅನ್ನು ತಾನು ಒಪ್ಪಿಕೊಂಡೆ ಎಂದಿದ್ದಾನೆ. ಇಲ್ಲಿ ಮೂರು ಮದುವೆಯಾಗುವ ಅವಕಾಶ ಕಾನೂನಿನ ಅಡಿ ಇದ್ದರೂ ನಮ್ಮ ಮನೆಯಲ್ಲಿ ಇದಕ್ಕೆ ಮೊದಲು ಒಪ್ಪಿಗೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ವಿವಾಹಕ್ಕೂ ಸಿಟ್ಟಿನಿಂದ ಯಾರೂ ಬರಲಿಲ್ಲ. ಎಲ್ಲರನ್ನೂ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇನೆ'' ಎಂದು ಲುವಿಜೋ ಹೇಳಿದ್ದಾರೆ.