-->
ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ Missing

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ Missing

ಮಂಗಳೂರು: ಮಕ್ಕಳಿಬ್ಬರೊಂದಿಗೆ ತಾಯಿ ನಾಪತ್ತೆಯಾಗಿರುವ ಬಗ್ಗೆ ನಗರದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಕಾಟಿಪಳ್ಳ ಸಮೀಪದ ಗಣೇಶ ಪುರ ನಿವಾಸಿ ಭಾರತಿ ಮಾದರ (35) ಮಕ್ಕಳಾದ ಅಮೃತ (11) ಮತ್ತು ಗಣೇಶ್ (9) ನಾಪತ್ತೆಯಾದವರು. ಈ ತಾಯಿ ಮಕ್ಕಳು ಮಾ.21ರ ರಾತ್ರಿ ಮನೆಯಿಂದ ಹೋದವರು ಇದುವರೆಗೆ ವಾಪಸಾಗಿಲ್ಲವೆಂದು ದೂರು ದಾಖಲಾಗಿದೆ.

*ಕಾಣೆಯಾದವರ ಚಹರೆ ಇಂತಿದೆ*

ಭಾರತಿ ಮಾದರ: ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, 4 ಅಡಿ 6 ಇಂಚು ಎತ್ತರ, ಬಲಗೈಯಲ್ಲಿ ಎಚ್.ಬಿ. ಎಂಬ ಹಚ್ಚೆ ಇದೆ, ಕನ್ನಡ, ಹಿಂದಿ ಮತ್ತು ತುಳು ಭಾಷೆ ಅರ್ಥವಾಗುತ್ತದೆ. ನಾಪತ್ತೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಕೆಂಪು ಚುಕ್ಕೆಗಳಿರುವ ಸೀರೆ ಹಾಗೂ ಕಪ್ಪು ಬಣ್ಣದ ರವಿಕೆ ಧರಿಸಿರುತ್ತಾರೆ.

ಅಮೃತಾ: 3 ಅಡಿ 5ಇಂಚು ಎತ್ತರ, 5ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾದ ಸಂದರ್ಭದಲ್ಲಿ ಕಪ್ಪುಬಣ್ಣದ ಧೋತಿ ಪ್ಯಾಂಟ್ ಮತ್ತು  ಕೆಂಪು ಬಣ್ಣದ ಟಾಪ್ ಧರಿಸಿರುತ್ತಾಳೆ.

ಗಣೇಶ: 3 ಅಡಿ ಎತ್ತರ, 3ನೇ ತರಗತಿ ಓದುತ್ತಿದ್ದು, ಎಣ್ಣೆ ಕಪ್ಪು ಮೈಬಣ್ಣ, ಕನ್ನಡ ಭಾಷೆ ತಿಳಿಯುತ್ತದೆ, ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾರೆ.

ಈ ತಾಯಿ ಮಕ್ಕಳು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂ.ಸಂಖ್ಯೆ: 0824-2220540, ಮೊ.ಸಂಖ್ಯೆ:- 9480805360, 9480802345, ಕಂಟ್ರೋಲ್ ರೂಂ: 0824-2220800 ಮೂಲಕ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article