ಸರಗಳವುಗೈದ ಮಿಸ್ಟರ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿದ್ದ ಆರೋಪಿ ಅಂದರ್: ಸಾಲದ ಸುಳಿಯಲ್ಲಿ ಸಿಲುಕಿರೋದೇ ಕೃತ್ಯಕ್ಕೆ ಕಾರಣ!
Monday, March 21, 2022
ಚೆನ್ನೈ: ಚೆನ್ನೈನ ಮನ್ನಾಡಿ ಎಂಬಲ್ಲಿನ ಮಾಜಿ ಮಿಸ್ಟರ್ ಇಂಡಿಯಾ, ಬಿ.ಟೆಕ್ ಪದವೀಧರನೋರ್ವನು ಸರಗಳ್ಳತನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾನೆ.
ಚೆನ್ನೈನ ಮನ್ನಾಡಿ ನಿವಾಸಿ ಮೊಹಮ್ಮದ್ ಫೈಝಲ್(22) ಸರಗಳವು ಮಾಡಿದ ಆರೋಪಿ.
ಮಾರ್ಚ್ 17 ರಂದು ರತ್ನಾದೇವಿ ಎಂಬ ಮಹಿಳೆಯ ಸರಗಳವು ಮಾಡಲಾಗಿತ್ತು. ಆಕೆ ನೀಡಿರುವ ದೂರಿನನ್ವಯ ಮೇಲೆ ಮೊಹಮದ್ ಫೈಝಲ್ ಬಂಧನವಾಗಿದೆ. ಸಿಸಿ ಕ್ಯಾಮರಾದ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೊಹಮ್ಮದ್ ಫೈಝಲ್ 2020 ರಲ್ಲಿ ಪದವಿ ಪೂರ್ಣಗೊಳಿಸಿದ್ದಾನೆ. ಬಾಡಿಬಿಲ್ಡರ್ ಆಗಿದ್ದ ಈತ 2019 ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನೂ ಮುಡಿಗೇರಿಸಿದ್ದನು. ಪದವಿಯ ಬಳಿಕ ಮೊಬೈಲ್ ಫೋನ್ ಮರು ಮಾರಾಟ ವ್ಯವಹಾರ ಆರಂಭಿಸಿದ್ದ. ಆದರೆ ಕೋವಿಡ್ ಸಮಯದಲ್ಲಿ ನಷ್ಟವನ್ನು ಅನುಭವಿಸಿ, ಸಾಲಗಾರರಿಗೆ ನೀಡಬೇಕಾದ ಹಣವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ತಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.