
ಗ್ರಾಪಂ ಸದಸ್ಯನೊಂದಿಗೆ ಅಕ್ರಮ ಸಂಬಂಧ: ಪ್ರಶ್ನಿಸಿದ ಪುತ್ರನನ್ನೇ ಕೊಲೆಗೈದ ಹೆತ್ತವ್ವೆ!
Wednesday, March 2, 2022
ಕೊಪ್ಪಳ: ಕೆಟ್ಟ ಮಕ್ಕಳು ಹುಟ್ಟಬಹದು, ಆದರೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ಹೆತ್ತ ತಾಯಿ ತನ್ನ ಪುತ್ರನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿರುವುದಕ್ಕೆ ಕೋಪಗೊಂಡ ಆಕೆ ಪುತ್ರನನ್ನೇ ಹತ್ಯೆ ಮಾಡಿದ್ದಾಳೆ. ಇಂಥದ್ದೊಂದು ಘಟನೆ ಕೊಪ್ಪಳ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಮ್ಯಾದಾರಡೊಕ್ಕಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್(22) ಎಂಬಾತ ಕೊಲೆಯಾದ ದುರ್ದೈವಿ. ಗ್ರಾಮದ ಪಂಚಾಯತ್ ಸದಸ್ಯ ಅಮರಪ್ಪ ಕಂದಗಲ್ ಎಂಬಾತನೊಂದಿಗೆ ಬಸವರಾಜ್ ತಾಯಿ ಅಮರಮ್ಮ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕಾಗಿ ತನ್ನ ಹಿರಿಯ ಮಗನ ಜತೆಗೂಡಿ ಈ ಕೊಲೆ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬಸವರಾಜ್ ತನ್ನ ತಾಯಿ ಹಾಗೂ ಸೋದರನೊಂದಿಗೆ ವಾಸವಾಗಿದ್ದನು. ಜ.16ರಂದು ಮನೆಯಲ್ಲಿ ಅಮರಪ್ಪ ಮತ್ತು ಅಮರಮ್ಮ ಜತೆಯಾಗಿರೋದನ್ನು ಬಸವರಾಜ್ ನೋಡಿದ್ದಾನೆ. ಇದನ್ನು ಬಸವರಾಜ್ ಪ್ರಶ್ನೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಅಮರಪ್ಪನ ಸಹಾಯದಿಂದ ಅಮರಮ್ಮ ತನ್ನ ಪುತ್ರನನೇ ಹತ್ಯೆ ಮಾಡಿದ್ದಾಳೆ. ಬಳಿಕ ಹಿರಿಯ ಪುತ್ರನ ಸಹಾಯದಿಂದ ಬಸವರಾಜ್ ನ ಮೃತದೇಹ ಹೊಂಡ ತೆಗೆದು ಮುಚ್ಚಿ ಹಾಕಿದ್ದಾರೆ. ಆದರೆ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಇಂದು ಮೃತದೇಹ ಹೊರ ತೆಗೆಯುವ ಸಾಧ್ಯತೆಗಳಿವೆ. ಈ ಬಗ್ಗೆ ತಾವರೆಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.