ಮದುವೆಯಾಗದ ಚಿಂತೆಯಲ್ಲಿ ವಿಷ ಸೇವಿಸಿ ಯುವಕ ಮೃತ್ಯು
Saturday, March 19, 2022
ಚಾಮರಾಜನಗರ: ವಯಸ್ಸು 34 ದಾಟಿದರೂ ಮದುವೆಯಾಗಲಿಲ್ಲ ಎಂಬ ಚಿಂತೆಗೊಳಗಾದ ಯುವಕನೊಬ್ಬ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರು ಪಟ್ಟಣದ ವಿನೋದ್(34) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ವಿನೋದ್ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಲ್ಲಿ ಕೆಲಸ ಮಾಡಲಾಗದೆ ಊರಿಗೆ ಮರಳಿದ್ದರು ಎಂದು ತಿಳಿದು ಬಂದಿದೆ.
ತನ್ನ ಸಹೋದರರು, ಸಹೋದರಿಯರಿಗೆ ವಿವಾಹವಾದರೂ ತನಗಿನ್ನೂ ಆಗಿಲ್ಲವೆಂಬ ಖಿನ್ನತೆಯಲ್ಲಿ ವಿನೋದ್ ಮದ್ಯ ವ್ಯಸನಿಯಾಗಿದ್ದನು. ಈತ ಜ.17ರಂದು ಮನೆಯ ಕೋಣೆಗೆ ಸುಣ್ಣ ಬಳಿಯುವೆನೆಂದು ಒಳಗೆ ವಿಷ ಸೇವನೆ ಮಾಡಿದ್ದಾನೆ. ವಿಷಯ ತಿಳಿದು ತಕ್ಷಣ ಆತನನ್ನು ಕೊಳ್ಳೆಗಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.