
ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆಯ ಅಧಿಕಾರಿಯಾದ ಪಿಯು ಟಾಪರ್ ವಿದ್ಯಾರ್ಥಿನಿ
Wednesday, March 9, 2022
ಕಲಬುರಗಿ: ಪಿಯುಸಿಯಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿನಿಯೋರ್ವಳು ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣಾಧಿಕಾರಿಯಾಗಿದ್ದಾಳೆ. ಈಕೆಯನ್ನು ಠಾಣಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಕಲಬುರಗಿ ಜಿಲ್ಲಾ ಪೊಲೀಸರು ವಿಶಿಷ್ಟವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆಯನ್ನು ಹಲವಾರು ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ಅಫಜಲಪುರ ತಾಲೂಕಿನ ರೇವೂರ್ ಪೊಲೀಸ್ ಠಾಣೆಯ ಎಸ್ಎಚ್ಒ ಆಗಿ ಕುಮಾರಿ ಮೇಘಾ ಮೇತ್ರೆಯನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ಒಂದು ದಿನದ ಮಟ್ಟಿಗೆ ರೇವೂರ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ ಮೇಘಾ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಮಹಿಳಾ ದಿನಾಚರಣೆಯ ಅಂಗವಾಗಿ ಕುಮಾರಿಮೇಘಾ ಮೇತ್ರೆಳನ್ನು ಪೊಲೀಸ್ ಅಧಿಕಾರಿಗಳು ಸನ್ಮಾನಿಸಿದ್ದಾರೆ.