
ಸೌತ್ ಬ್ಯೂಟಿ ಸಮಂತಾ ಯಾಕೆ ಹೀಗಾಡ್ತಿದ್ದಾರೆ: ಇದು ಅವರ ಗೌರವಕ್ಕೆ ಧಕ್ಕೆಯಾಗ್ತಿದೆ!
Saturday, March 19, 2022
ಹೈದರಾಬಾದ್: ಸೌತ್ ಬ್ಯೂಟಿ ಸಮಂತಾ ಸದ್ಯ ನಾಗಚೈತನ್ಯರಿಂದ ವಿಚ್ಛೇದನ ಪಡೆದು ಟಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳತ್ತ ತಮ್ಮ ಗಮನಹರಿಸುವ ಮೂಲಕ ಸಿನಿಮಾ ರಂಗದಲ್ಲಿ ಸಂಪೂರ್ಣ ಬಿಜಿಯಾಗಿದ್ದಾರೆ. ಇದೀಗ ಸಮಂತಾ ಕುರಿತು ಬಂದಿರುವ ವದಂತಿಯು ನಿಜವಾಗಿದ್ದಲ್ಲಿ, ಖಂಡಿತವಾಗಿಯೂ ಆ ಬಗ್ಗೆ ಅವರು ಚಿಂತಿಸಲೇ ಬೇಕಾಗುತ್ತದೆ.
ಹೌದು ಸಾಕಷ್ಟು ಬಿಜಿಯಾಗಿರುವ ಸಮಂತಾ, ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಹಲವಾರು ಸಭೆಗಳು, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಹಾಗೂ ಪಿಆರ್ ಚಟುವಟಿಕೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಬಾಲಿವುಡ್ನಲ್ಲಿ ಹೆಚ್ಚು ಬಿಜಿಯಾಗಿರುವುದು ಸೌತ್ ಸಿನಿಮಾ ರಂಗದ ಅವರ ಸಿನಿಮಾ ಕಾರ್ಯಗಳ ಮೇಲೆ ಪರಿಣಾಮ ಬೀರಲಿದೆ. ಮುಂಬೈನಲ್ಲಿ ಆಕೆ ಹೋಗಿ ಕುಳಿತುಬಿಟ್ಟರೆ, ಇಲ್ಲಿನ ಸಿನಿಮಾಗಳನ್ನು ಯಾರು ಮುಗಿಸಿಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಂತೆ.
ಮುಂಬೈನಲ್ಲಿ ನಡೆಯುವ ಸಭೆಗಳು ಹಾಗೂ ಕಾರ್ಯಕ್ರಮಗಳಿಗೆ ಹಾಜರಾಗಲು ಸಮಂತಾ ಕೆಲವೊಮ್ಮೆ ಚಿತ್ರೀಕರಣವನ್ನು ಅರ್ಧದಲ್ಲಿ ರದ್ದುಗೊಳಿಸುತ್ತಿದ್ದಾರೆ ಎಂಬುದು ಇತ್ತೀಚಿನ ವದಂತಿಯಾಗಿದೆ. ಇತ್ತೀಚೆಗಷ್ಟೇ ಸೆಟ್ ಒಂದರಲ್ಲಿ ನಡೆದಿರುವ ಇಂತಹ ಘಟನೆಯೊಂದು ಈ ಮಾತಿಗೆ ಪುಷ್ಟಿ ದೊರಕಿದಂತಿದೆ ಎಂಬುದು ಉದ್ಯಮ ವಲಯದಲ್ಲಿ ಚರ್ಚೆಯಾಗುತ್ತಿದೆ. ಅನೇಕ ದಿನಗಳಿಂದ ಸಮಂತಾರನ್ನಹ ನೋಡುತ್ತಿರುವವರು ಇವರು ನಾವು ಮೊದಲು ನೋಡಿದ ಸಮಂತಾ ಅಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ. ಈ ಮೊದಲು ಸಮಂತಾ ಬಹಳ ಪರಿಶ್ರಮ ವಹಿಸಿ ಕೆಲಸ ಮಾಡುತ್ತಿದ್ದರಂತೆ. ಅಲ್ಲದೆ, ವೃತ್ತಿಪರತೆ ಮತ್ತು ಸೆಟ್‌ಗಳಲ್ಲಿ ಬಹಳ ಕೂಲ್ ಆಗಿ ಮತ್ತು ವಿನಮ್ರವಾಗಿ ವರ್ತಿಸಲು ಹೆಸರುವಾಸಿಯಾಗಿದ್ದರಂತೆ.
ಆದರೆ ಈಗ ಸೆಟ್ನಲ್ಲಿ ಮೂಡ್ ಸ್ವಿಂಗ್ ಮತ್ತು ಆಗಾಗ ಸಿಡಿಮಿಡಿಗೊಳ್ಳುತ್ತಿದ್ದಾರಂತೆ. ಇದು ಅವರ ಗೌರವಕ್ಕೆ ಧಕ್ಕೆಯಾಗಬಹುದು ಎಂದು ಸಮಂತಾರನ್ನು ಹತ್ತಿರದಿಂದ ನೋಡಿದವರ ಅಭಿಪ್ರಾಯವಾಗಿದೆ. ಇದನ್ನು ಅರಿತುಕೊಂಡು ಸಮಂತಾ ಸರಿಮಾಡಿಕೊಳ್ಳುತ್ತಾರೆ ಎಂಬ ನಂಬಿಕೆಯು ಅವರಲ್ಲಿ ಇದೆ.