ಮಂಗಳೂರು: ಖ್ಯಾತ ಜವಳಿ ಉದ್ಯಮಿಯ ಸೊಸೆ, ಉದ್ಯಮಿ ಮಹಿಳೆ ಆತ್ಮಹತ್ಯೆ
Tuesday, March 15, 2022
ಮಂಗಳೂರು: ನಗರದ ಅತ್ಯಂತ ಖ್ಯಾತ, ಹಳೆಯ ಜವಳಿ ಉದ್ಯಮಿ ಪಿ.ಕೆ.ದೂಜ ಪೂಜಾರಿಯವರ ಸೊಸೆ, ಭೂಮಿಕಾ ಟೆಕ್ಸ್‌ಟೈಲ್‌ನ ಮಾಲಕಿ, ಉದ್ಯಮಿ ನೇಣಿಗೆ ಶರಣಾಗಿದ್ದಾರೆ.
ಉದ್ಯಮಿ ಸುಮಾ ಸತೀಶ್
ಮಂಗಳವಾರ ಮನೆಯ ಬಾಲ್ಕನಿಯಲ್ಲಿ ನೇಣಿಗೆ ಕುಣಿಕೆ ಒಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.
ನಗರದ ಮಣ್ಣಗುಡ್ಡದಲ್ಲಿರುವ ಅಭಿಮಾನ್ ಮೆನ್‌ಷನ್ ಅಪಾರ್ಟ್‌ಮೆಂಟ್‌ನ ತಾವು ವಾಸವಾಗಿರುವ ಫ್ಲ್ಯಾಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.