
ಹಲ್ಲುಜ್ಜುತ್ತಿದ್ದ ಮಹಿಳೆ ಕಾಲುಜಾರಿ ಬಿದ್ದು ಗಂಟಲಿನಿಂದ ಹೊರಬಂದ ಟೂತ್‌ಬ್ರಶ್
Thursday, March 10, 2022
ಕಾಂಚಿಪುರಂ: ಹಲ್ಲುಜ್ಜುತ್ತಿದ್ದ ವೇಳೆ ಕಾಲುಜಾರಿ ಬಿದ್ದ ಮಹಿಳೆಯ ಗಂಟಲಿನಿಂದ ಟೂತ್‌ಬ್ರಶ್ ಹೊರಬಂದು ಬಾಯಿಯೊಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದಿದೆ.
ಕಾಂಚಿಪುರಂ ನಿವಾಸಿ ರೇವತಿ (34) ಗಾಯಗೊಂಡ ಮಹಿಳೆ.
ಮಾ.8ರಂದು ಬೆಳಗ್ಗೆ ಹಲ್ಲುಜ್ಜುವ ವೇಳೆ ರೇವತಿ ಕಾಲು ಜಾರಿ ಬಿದ್ದಿದ್ದಾರೆ. ಆಗ ಟೂತ್ ಬ್ರಶ್ ಅವರ ಬಾಯಿಯೊಳಗೆ ಸಿಲುಕಿ ಗಂಟಲಿಂದ ಹೊರಬಂದಿದೆ. ಆದರೆ ಮನೆಯಲ್ಲಿ ಅದನ್ನು ಹೊರತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲ ಬ್ರಷ್ ಅನ್ನು ತುಂಡರಿಸಿ ಹೊರತೆಗೆದಿದ್ದಾರೆ. ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.