-->

ಉಕ್ರೇನ್ ನಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾದ ಮಂಗಳೂರು ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ!

ಉಕ್ರೇನ್ ನಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾದ ಮಂಗಳೂರು ಮೂಲದ ಎಂಬಿಬಿಎಸ್ ವಿದ್ಯಾರ್ಥಿನಿ!

ಮಂಗಳೂರು: ಉಕ್ರೇನ್​​ನಲ್ಲಿ ರಷ್ಯಾ ಮಾಡುತ್ತಿರುವ ಯುದ್ಧ ಮುಂದುವರಿದಿದೆ. ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಮರಳಿ ತಾಯ್ನಾಡಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ ಈ ಮಧ್ಯೆ ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದಾಳೆ.

ಮಂಗಳೂರು ನಗರದ ದೇರೆಬೈಲ್​ ನಿವಾಸಿಯಾಗಿದ್ದ ಅನೈನಾ ಅನ್ನಾ ದಾಳಿಗೊಳಗಾದ ಉಕ್ರೇನ್ ನ ಖಾರ್ಕಿವ್ ನಗರದಲ್ಲಿದ್ದರು. ಈಕೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುನಿವರ್ಸಿಟಿ ಕಟ್ಟಡದ ಬಳಿಯಲ್ಲೇ ಕಟ್ಟಡವೊಂದು ಸ್ಫೋಟಗೊಂಡಿತ್ತು. ಆದ್ದರಿಂದ ಆಕೆ ಬಂಕರ್ ಬಿಟ್ಟು ರೈಲು ಹತ್ತಿದ್ದಾರೆ. ಆದರೆ, ಇವರ ಪಾಸ್​ಪೋರ್ಟ್ ಏಜೆಂಟ್ ಓರ್ವನ ಬಳಿಯಿದೆ. ಆತನಿಗೆ ಕರೆ ಮಾಡಿದರೆ ಆತನಿರುವಲ್ಲಿಗೆ ಬಂದು ಪಡೆಯುವಂತೆ ಹೇಳುತ್ತಿದ್ದಾರೆ. ಆದರೆ, ಅವನಿದ್ದ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಇದೀಗ ಅನೈನಾ ಅನ್ನಾ ರೈಲು ಹತ್ತಿ ಪೋಲೆಂಡ್​ ಕಡೆಗೆ ಹೊರಟಿರುವುದರಿಂದ ಪಾಸ್​ಪೋರ್ಟ್ ಸಿಗುವ ಸಾಧ್ಯತೆ ಕಡಿಮೆ. ಈ ಬಗ್ಗೆ ರಾಯಭಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ತಾತ್ಕಾಲಿಕ ವ್ಯವಸ್ಥೆಯ ಭರವಸೆಯನ್ನು ನೀಡಿದ್ದಾರೆ ಎಂದು ಅನೈನಾ ಅನ್ನಾ ತಾಯಿ ಸಂಧ್ಯಾ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article