VHP urges to stop Salam Arathi in Kolluru- ಕೊಲ್ಲೂರು ಸಲಾಂ ಆರತಿಗೂ ಬಂತು ಸಂಚಕಾರ!- ವಿಎಚ್‌ಪಿ ಕೆಂಗಣ್ಣಿಗೆ ಕಾರಣವೇನು..?
ಕೊಲ್ಲೂರು ಸಲಾಂ ಆರತಿಗೂ ಬಂತು ಸಂಚಕಾರ!- ವಿಎಚ್‌ಪಿ ಕೆಂಗಣ್ಣಿಗೆ ಕಾರಣವೇನು..?
ಪ್ರತಿದಿನ ರಾತ್ರಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಯುವ 8 ಗಂಟೆಗೆ ನಡೆಯುವ ‘ಸಲಾಂ’ ಹೆಸರಿಗೆ ಈಗ ಸಂಚಕಾರ ಬಂದಿದೆ.
ದೇವಿ ಮೂಕಾಂಬಿಕೆಗೆ ಮಂಗಳಾರತಿ ಸಲಾಂ ಆರತಿ ನಡೆಯುತ್ತಿರುವ ಬಗ್ಗೆ ವಿಎಚ್‌ಪಿ ಕೆಂಡ ಕಾರಿದೆ.
ತಕ್ಷಣ ಇದನ್ನು ರದ್ದು ಮಾಡಬೇಕು ಎಂದು ವಿಹೆಚ್‌ಪಿಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಿಯ ಕ್ಷೇತ್ರಕ್ಕೆ ಭೇಟಿ ನೀಡಿದ ಶರಣ್ ಪಂಪ್‌ವೆಲ್, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಸಲಾಂ ಆರತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ.. ಮಾತ್ರವಲ್ಲ, ಹಿಂದೂ ವಿರೋಧಿ... ಮತಾಂಧ, ಕನ್ನಡ ವಿರೋಧಿ... ದೇವಸ್ಥಾನ ಧ್ವಂಸ ಮಾಡಿದ ಈತನ ಹೆಸರಿನಲ್ಲಿ ಕೊಲ್ಲೂರಿನಲ್ಲಿ ಪ್ರತಿನಿತ್ಯ ಸಲಾಂ ಹೆಸರಿನ ಮಂಗಳಾರತಿಯಾಗುತ್ತಿದೆ. ಇದು ಮೂಕಾಂಬಿಕೆ ಭಕ್ತರ ಮನಸ್ಸಿಗೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ಸಲಾಂ ಹೆಸರಿನ ಮಹಾ ಮಂಗಳಾರತಿ ರದ್ದು ಮಾಡಬೇಕು ಎಂಬ ಆಗ್ರಹವನ್ನು ಸರ್ಕಾರಕ್ಕೆ ಮಾಡಿದ್ದೇವೆ ಎಂದು ಮಾಧ್ಯಮಕ್ಕೆ ಅವರು ತಿಳಿಸಿದ್ದಾರೆ.