Man Suicide for illicit relationship - ನನಗೆ ನೀನೇ ಬೇಕು ಎಂದ ಮದುವೆಯಾದ ಆಂಟಿ: ಅನೈತಿಕ ಸಂಬಂಧಕ್ಕೆ ಯುವಕ ಕಂಗಾಲು!
ನನಗೆ ನೀನೇ ಬೇಕು ಎಂದ ಮದುವೆಯಾದ ಆಂಟಿ: ಅನೈತಿಕ ಸಂಬಂಧಕ್ಕೆ ಯುವಕ ಕಂಗಾಲು!
ಆ ಮಹಿಳೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಆಕೆ ಗ್ರಾಮದ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಶುರು ಮಾಡಿದ್ದಳು. ಆಕೆಯ ಕಾಟ ಎಷ್ಟು ಹೆಚ್ಚಾಯಿತೆಂದರೆ, ಆ ಆಂಟಿಯ ಕಿರುಕುಳ ತಾಳಲಾರದೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಈ ವಿಚಿತ್ರ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ.
ಆತ್ಮಹತ್ಯೆ ಮಾಡಿದ ಯುವಕ 28 ವರ್ಷದ ಮುನಿಕೃಷ್ಣ ಎಂದು ಗುರುತಿಸಲಾಗಿದೆ.
ಈ ಅನೈತಿಕ ಚಟುವಟಿಕೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರಬರುತ್ತಾ ಮುನಿಕೃಷ್ಣ ಈ ಅನೈತಿಕ ಚಟುವಟಿಕೆಯಿಂದ ರೋಸಿಹೋದ, ಆಂಟಿಯಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ.
ಈ ವಿಚಾರ ಆಕೆಗೆ ಗೊತ್ತಾಗುತ್ತಲೇ, ಆಕೆ ಮುನಿಕೃಷ್ಣ ಬೆನ್ನತ್ತಿದಳು.
"ನೀನು ನನಗೇ ಬೇಕು. ಯಾರಿಗೂ ನಾನು ಬಿಟ್ಟುಕೊಡಲ್ಲ" ಎಂದು ಹುಚ್ಚು ಪಟ್ಟು ಹಿಡಿದಿದಳು ಪ್ರೇಯಸಿಯ ಈ ಕಾಟ ಮತ್ತು ಮಾನಸಿಕ ಕಿರುಕುಳ ತಾಳಲಾರದೇ ಯುವಕ ಮುನಿಕೃಷ್ಣ ದುರಂತ ಅಂತ್ಯ ಕಂಡಿದ್ದಾನೆ.
ಮುನಿಕೃಷ್ಣಗೆ ವಿವಾಹಿತ ಮಹಿಳೆ ಜತೆ ಇದ್ದ ಅನೈತಿಕ ಸಂಬಂಧ ಕಡಿಯಲು ಮುಂದಾಗಿದ್ದ. ಏಕೆಂದರೆ, ಆತ ಇತ್ತೀಚಿಗೆ ಬೇರೊಬ್ಬ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ತಿಳಿದು ಕೆಂಡಾಮಂಡಲವಾಗಿದ್ದ ಪ್ರೇಯಸಿ, ಮುನಿಕೃಷ್ಣಗೆ ಮಾನಸಿಕ ಕಿರುಕುಳ ಕೊಡಲಾರಂಭಿಸಿದ್ದಳು.
ಅನೈತಿಕ ಚಟುವಟಿಕೆಯಿಂದ ಕಂಗಾಲಾಗಿದ್ದ ಯುವಕ ಆಕೆಯ ಕಿರುಕುಳ ತಡೆಯಲಾಗದೆ ಸೆಲ್ಫಿ ವಿಡಿಯೋ ಮಾಡಿ ತಲೆತಲೆ ಚಚ್ಚಿಕೊಂಡು, ಕೆನ್ನೆಗೆ ತನಗೆ ತಾನೇ ಹೊಡೆದುಕೊಂಡು "ತಪ್ಪು ಮಾಡಿಬಿಟ್ಟೆ" ಎಂಬಂತೆ ಬಿಕ್ಕಿಬಿಕ್ಕಿ ಅತ್ತಿದ್ದಾನೆ.
ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸುವ ದೃಶ್ಯ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.