-->
ತರಗತಿ ಕೊಠಡಿಯೊಳಗೆ ಮದ್ಯಸೇವನೆ ಮಾಡಿದ ಕಾಲೇಜು ವಿದ್ಯಾರ್ಥಿನಿಯರು: 10 ಮಂದಿ ಅಮಾನತು

ತರಗತಿ ಕೊಠಡಿಯೊಳಗೆ ಮದ್ಯಸೇವನೆ ಮಾಡಿದ ಕಾಲೇಜು ವಿದ್ಯಾರ್ಥಿನಿಯರು: 10 ಮಂದಿ ಅಮಾನತು

ಕಾಂಚಿಪುರಂ(ತಮಿಳುನಾಡು): ಕಾಲೇಜು ವಿದ್ಯಾರ್ಥಿನಿಯರ ಗುಂಪೊಂದು ತರಗತಿಯೊಳಗಡೆಯೇ ಕಂಠಪೂರ್ತಿ ಮದ್ಯಪಾನ ಮಾಡಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ. ಇದರ ವೀಡಿಯೋ ವೈರಲ್ ಆಗಿತ್ತು.

ಕಾಂಚಿಪುರಂನ ಎನತ್ತೂರ್​​ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೋದಲ್ಲಿ ಕಾಣಿಸಿಕೊಂಡ ಪ್ರಕಾರ, ಒಟ್ಟು 10 ವಿದ್ಯಾರ್ಥಿನಿಯರು ತರಗತಿಯಲ್ಲಿದ್ದರು. ಇವರಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮದ್ಯ ಸೇವನೆ ಮಾಡಿದ್ದಾರೆ. ಉಳಿದವರು ಅವರಿಗೆ ಸಹಾಯ ಮಾಡಿದ್ದಾರೆ. ಇವರು ಕೂಲ್​ ಡ್ರಿಂಕ್ಸ್​ ಬಾಟಲಿಯಲ್ಲಿ ಮದ್ಯ ಬೆರೆಸಿ, ಸೇವನೆ ಮಾಡಿದ್ದಾರೆ. ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ ಪೋಷಕರ ಗಮನಕ್ಕೆ ತರಲಾಗಿದೆ. ಜೊತೆಗೆ, ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಸಮಾಲೋಚನೆ ನಡೆಸುವಂತೆಯೂ ಸೂಚನೆ ನೀಡಲಾಗಿದೆ.



ಕಳೆದ ತಿಂಗಳು ತಮಿಳುನಾಡಿನ ಸರ್ಕಾರಿ ಬಸ್​​ವೊಂದರಲ್ಲೇ ವಿದ್ಯಾರ್ಥಿನಿಯರು ಮದ್ಯ ಸೇವನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿತ್ತು. ತಿರುಕಝಕುಂದ್ರಂನಿಂದ ಠಾಚೂರ್​ಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿನಿಯರ ಗುಂಪು ಮದ್ಯಪಾನ ಮಾಡಿದ್ದರು.

Ads on article

Advertise in articles 1

advertising articles 2

Advertise under the article