ಪ್ರಾರ್ಥನೆಗೆ ಚರ್ಚ್ ಗೆ ಬಂದಿದ್ದ 11ರ ಬಾಲಕಿಯನ್ನು ಅತ್ಯಾಚಾರಗೈದ ಪಾದ್ರಿ!
Monday, April 25, 2022
ಬಾಗ್‌ಪತ್(ಉತ್ತರಪ್ರದೇಶ): ಪ್ರಾರ್ಥನೆ ಮಾಡಲೆಂದು ಬಂದಿದ್ದ 11 ರ ಬಾಲಕಿಯನ್ನು ಚರ್ಚ್ ಪಾದ್ರಿಯೊಬ್ಬನು ಅತ್ಯಾಚಾರಗೈದಿರುವ ಘಟನೆ ಉತ್ತರಪ್ರದೇಶದ ಚಾಂದಿನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಾದ್ರಿ ಆಲ್ಬರ್ಟ್ನನ್ನು ಬಂಧಿಸಲಾಗಿದೆ.
ಬಾಲಕಿಯು ಚರ್ಚ್ಗೆ ಪ್ರಾರ್ಥನೆ ಸಲ್ಲಿಸಲೆಂದು ಬಂದಿದ್ದಾಳೆ. ಈ ಸಂದರ್ಭ ಅಲ್ಲಿನ ಪಾದ್ರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಬಳಿಕ ಮನೆಗೆ ಬಂದ ಬಾಲಕಿ ತನ್ನ ತಾಯಿಯ ಬಳಿ ಅಮಾನುಷ ಕೃತ್ಯವನ್ನು ತಿಳಿಸಿದ್ದಾಳೆ. ತಾಯಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ.