ಒಂದು ಹಾಡಿಗೆ ಸ್ಟೆಪ್ ಹಾಕಿದ ಪೂಜಾ ಹೆಗ್ಡೆಗೆ 1.25 ಕೋಟಿ ರೂ. ಸಂಭಾವನೆ: 'ಎಫ್ 2' ಸಿನಿಮಾ ತಂಡದಿಂದ ಭರ್ಜರಿ ಆಫರ್
Saturday, April 16, 2022
ಹೈದರಾಬಾದ್: ಇತ್ತೀಚೆಗೆ ತೆರೆಕಂಡ ತೆಲುಗು ಸಿನಿರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್' ಸಿನಿಮಾ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ. ಆದರೆ 'ರಾಧೇಶ್ಯಾಮ್' ಸಿನಿಮಾ ಬೆಡಗಿ ಪೂಜಾ ಹೆಗ್ಡೆ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದವು. ಅದೇ ರೀತಿ ವಿಜಯ್ ಅಭಿನಯದ ‘ಬೀಸ್ಟ್’ ಸಿನಿಮಾ ಕೂಡಾ ಹೇಳಿಕೊಳ್ಳವಂತಹ ಯಶಸ್ಸು ಕಂಡಿರದಿದ್ದರೂ ಪೂಜಾ ಹೆಗ್ಡೆ ಬೇಡಿಕೆ ಒಂದಿಷ್ಟೂ ಕಡಿಮೆಯಾಗಿಲ್ಲ.
ಯಾವುದೇ ಸಿನಿಮಾಗಳು ಗೆಲ್ಲಲಿ, ಸೋಲಲಿ ಆದರೆ ಟಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ಈಗೇಕೆ ಈ ಮಾತು ಎಂದರೆ, ವೆಂಕಟೇಶ್ ಹಾಗೂ ವರುಣ್ ತೇಜ್ ಅಭಿನಯದ ‘ಎಫ್ 2’ ಎಂಬ ಸಿನಿಮಾದಲ್ಲಿನ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಪೂಜಾ ಹೆಗ್ಡೆಗೆ ಚಿತ್ರತಂಡ ಭರ್ಜರಿ ಆಫರ್ ನೀಡಿದೆಯಂತೆ. ಸಿನಿಮಾವೊಂದರ ಅಭಿನಯಕ್ಕೆ ಪೂಜಾ ಹೆಗ್ಡೆ 2.50 - 3 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಆದರೆ, ‘ಎಫ್ 2’ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆಂದು ಅವರಿಗೆ 1.25 ಕೋಟಿ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಹಾಡಿನ ಚಿತ್ರೀಕರಣ ಪ್ರಾರಂಭವಾಗಿದ್ದು, ಈಗಾಗಲೇ ಪೂಜಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರಂತೆ.
ಆದರೆ ಸಂಭಾವನೆಯ ವಿಷಯವನ್ನು ಪೂಜಾ ಹೆಗ್ಡೆ ಬಳಿ ಕೇಳಿದರೆ ಆಕೆ ಹೀಗೆ ಹೇಳುತ್ತಾರೆ. 'ನನ್ನ ಸಂಭಾವನೆಯ ವಿಚಾರದ ಬಗ್ಗೆ ಮಾತನಾಡುವುದಕ್ಕೆ ತಮಗೆ ಇಷ್ಟವಿಲ್ಲ' ಎಂದು ಹೇಳುತ್ತಾರೆ.