-->
 'ಕೆಜಿಎಫ್​ ಚಾಪ್ಟರ್​-2' ಸಿನಿಮಾದ ಅಭಿನಯಕ್ಕೆ ಯಶ್, ಪ್ರಶಾಂತ್ ನೀಲ್ ಸೇರಿದಂತೆ ನಟ-ನಟಿಯರು ಪಡೆದ ಸಂಭಾವನೆ ಎಷ್ಟು ಗೊತ್ತೇ?

'ಕೆಜಿಎಫ್​ ಚಾಪ್ಟರ್​-2' ಸಿನಿಮಾದ ಅಭಿನಯಕ್ಕೆ ಯಶ್, ಪ್ರಶಾಂತ್ ನೀಲ್ ಸೇರಿದಂತೆ ನಟ-ನಟಿಯರು ಪಡೆದ ಸಂಭಾವನೆ ಎಷ್ಟು ಗೊತ್ತೇ?

ಮಂಗಳೂರು: ನೂತನ ದಾಖಲೆ ಸೃಷ್ಟಿಸಲು ಸಜ್ಜಾಗಿರುವ ಬಿಗ್ ಬಜೆಟ್ ಸಿನಿಮಾ 'ಕೆಜಿಎಫ್​ ಚಾಪ್ಟರ್​-2' ನಾಳೆ ವಿಶ್ವದಾದ್ಯಂತ ನಾಳೆ ತೆರೆ ಕಾಣಲಿದೆ. ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಕಾತರರಾಗಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ಪೂರೈಸಿರುವ ಈ ಸಿನಿಮಾದಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್​, ಸಂಜಯ್ ದತ್​, ನಟಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರೂ ಎಷ್ಟು ಸಂಭಾವನೆಯ ಪಡೆದಿದ್ದಾರೆಂಬ ವಿಚಾರದಲ್ಲಿ ಎಲ್ಲರಿಗೂ ಕುತೂಹಲ ಗರಿಗೆದರಿದೆ. 

ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್​, ನಟರಾದ ಅನಂತ್ ನಾಗ್, ಪ್ರಕಾಶ್ ರಾಜ್​ ಹಾಗೂ ಇತರರು ಸಿನಿಮಾದಲ್ಲಿನ ನಟನೆಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆಂದು ಗಾಂಧಿನಗರದ ಮಂದಿಯ ಮಾತು. ವರದಿಗಳ ಪ್ರಕಾರ, ರಾಕಿ ಭಾಯ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್​​ ಸುಮಾರು 25ರಿಂದ 27 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಧೀರನ ಪಾತ್ರದಲ್ಲಿ ನಟಿಸಿರುವ ಬಾಲಿವುಡ್​ ನಟ ಸಂಜಯ್ ದತ್​​ 9ರಿಂದ 10 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

ಭಾರತದ ಪ್ರಧಾನಿಯ ಪಾತ್ರದಲ್ಲಿ ನಟಿಸಿರುವ ನಟಿ ರವೀನಾ ಟಂಡನ್​​ 1-2 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ನಿರ್ದೇಶಕ ಹಾಗೂ ಬರಹಗಾರ ಪ್ರಶಾಂತ್ ನೀಲ್​​ ಈ ಸಿನಿಮಾಕ್ಕಾಗಿ 15ರಿಂದ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ರೀನಾ ದೇಸಾಯಿ ಪಾತ್ರದಲ್ಲಿ ನಟೆಸಿರುವ ನಟಿ ಶ್ರೀನಿಧಿ ಶೆಟ್ಟಿ 3ರಿಂದ 4 ಕೋಟಿ ರೂ. ಸಂಭಾವನೆ ಪಡೆದುಕೊಂಡಿರುವ ಸಾಧ್ಯತೆ ಇದೆ. ಉಳಿದಂತೆ ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಕಾಶ್  ರೈಯವರು 80ರಿಂದ 82 ಲಕ್ಷ ರೂ. ಚಾಪ್ಟರ್​ 1 ರಲ್ಲಿರುವ ಅನಂತ್​ ನಾಗ್ 50ರಿಂದ 52 ಲಕ್ಷ ರೂ. ಪಡೆದುಕೊಂಡಿದ್ದಾರೆ. ಸುದ್ದಿವಾಹಿನಿವೊಂದರ ಮುಖ್ಯ ಸಂಪಾದಕಿ ದೀಪಾ ಪಾತ್ರದ ನಟನೆಗೆ ಮಾಳವಿಕಾ ಅವಿನಾಶ್​​ 60ರಿಂದ 62 ಲಕ್ಷ ರೂ‌. ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article