![ಕೆಜಿಎಫ್-2 ಸಿನಿಮಾ ಬಾಲಿವುಡ್ ಮೇಲೆ ಅಣುಬಾಂಬ್ ಆಗಲಿದೆ: ನಿರ್ದೇಶಕ ಆರ್ ಜಿವಿ ಹೀಗೇಕೆ ಅಂದರು? ಕೆಜಿಎಫ್-2 ಸಿನಿಮಾ ಬಾಲಿವುಡ್ ಮೇಲೆ ಅಣುಬಾಂಬ್ ಆಗಲಿದೆ: ನಿರ್ದೇಶಕ ಆರ್ ಜಿವಿ ಹೀಗೇಕೆ ಅಂದರು?](https://blogger.googleusercontent.com/img/b/R29vZ2xl/AVvXsEhq16sQrYzOs8yR0b-SOHywHnYusRtdzlhL0TPGnvHhH1_ElVf9gHShOXmIJUihz4h3x4JBqnrH4xsG3CojtAzENHqLQmaR1l5d81dCf9waJF5x_imG8y15-Nle4gGxh2FdLFBwOe8fvy2Y/s1600/1650080257081886-0.png)
ಕೆಜಿಎಫ್-2 ಸಿನಿಮಾ ಬಾಲಿವುಡ್ ಮೇಲೆ ಅಣುಬಾಂಬ್ ಆಗಲಿದೆ: ನಿರ್ದೇಶಕ ಆರ್ ಜಿವಿ ಹೀಗೇಕೆ ಅಂದರು?
Saturday, April 16, 2022
ಬೆಂಗಳೂರು: ಕೆಜಿಎಫ್-2 ಸಿನಿಮಾ ಜಗತ್ತಿನಾದ್ಯಂತ ತೆರೆ ಮೇಲೆ ರಾರಾಜಿಸುತ್ತಿದೆ. ಇದೀಗ ಸಿನಿಮಾ ಭಾರಿ ಗಳಿಕೆಯನ್ನು ಮಾಡುವುದಲ್ಲದೆ, ಜನ ಮೆಚ್ಚುಗೆಯನ್ನೂ ಪಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳ ಖ್ಯಾತನಾಮರೂ ಕೆಜಿಎಫ್2 ಬಗ್ಗೆ ಮಾತನಾಡುತ್ತಿದ್ದಾರೆಂದರೆ ಸಿನಿಮಾ ಎಷ್ಟೊಂದು ಖ್ಯಾತಿ ಹೊಂದಿದೆ ಎಂದು ತಿಳಿದು ಬರುತ್ತದೆ.
ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕೂಡ ಕೆಜಿಎಫ್-2 ಸಿನಿಮಾ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ''ಸ್ಟಾರ್ ನಟರ ಸಂಭಾವನೆ ಬದಲು ಸಿನಿಮಾ ಮೇಕಿಂಗ್ ಮೇಲೆ ಹಣ ಹೂಡಿದರೆ ಖಂಡಿತಾ ಉತ್ತಮ ಗುಣಮಟ್ಟದ ಜತೆಗೆ ದೊಡ್ಡ ಮಟ್ಟದ ಯಶಸ್ಸು ಸಾಧ್ಯ ಎಂಬುದನ್ನು ಕೆಜಿಎಫ್-2ನ ರಾಕ್ಷಸ ಯಶಸ್ಸು ಸಾಬೀತುಪಡಿಸಿದೆ ಎಂದಿದ್ದಾರೆ. ಬಾಲಿವುಡ್ ಅನ್ನು ಮರೆತು ಬಿಡಿ, ತೆಲುಗು-ತಮಿಳು ಚಿತ್ರರಂಗದವರೂ ಇದುವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಕೆಜಿಎಫ್ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಅದನ್ನು ಜಗತ್ತಿನ ನಕ್ಷೆಯ ಮೇಲಿಟ್ಟಿದ್ದಾರೆ" ಎಂದಿದ್ದಾರೆ ಆರ್ಜಿವಿ.
ವಿಲನ್ಗಳ ಮೇಲೆ ಮಷಿನ್ ಗನ್ನಿಂದ ಗುಂಡುಗಳ ಸುರಿಮಳೆ ಸುರಿಯಲು ಹೇಗೆ ರಾಕಿಭಾಯ್ ಮುಂಬೈಗೆ ಬರುತ್ತಾನೋ ಅದೇ ರೀತಿ ಕೆಜಿಎಫ್ ನಟ ಯಶ್ ಬಾಲಿವುಡ್ನ ಎಲ್ಲಾ ಸ್ಟಾರ್ಗಳ ಓಪನಿಂಗ್ ಕಲೆಕ್ಷನ್ ಮೇಲೆ ಮಷಿನ್ ಗನ್ ಇಟ್ಟಿದ್ದಾರೆ. ಕೆಜಿಎಫ್ -2 ಸಿನಿಮಾದ ಅಂತಿಮ ಕಲೆಕ್ಷನ್ ಸ್ಯಾಂಡಲ್ವುಡ್ನಿಂದ ಬಾಲಿವುಡ್ಗೆ ಎಸೆದಿರುವ ಅಣುಬಾಂಬ್ ಆಗಿರಲಿದೆ ಎಂದು ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ.