ಅರ್ಧ ದಿನ ರಜೆ ಪಡೆಯಲೆಂದು 8ನೇ ತರಗತಿ ವಿದ್ಯಾರ್ಥಿ ನೀಡಿರುವ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Thursday, April 28, 2022
ಲಕ್ನೋ: ಶಾಲೆಯಲ್ಲಿ ರಜೆ ಪಡೆಯಲೆಂದು ಮಕ್ಕಳು ಅದೆನೇನೋ ತಿಪ್ಪರಲಾಗ ಹಾಕ್ತಾರೆ. ಒಂದಲ್ಲ ಒಂದು ಕಾರಣ ನೀಡಿ ರಜೆ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೋರ್ವ 8ನೇ ತರಗತಿ ವಿದ್ಯಾರ್ಥಿಯೋರ್ವನು ನೀಡಿರುವ ಕಾರಣ ಕೇಳಿದರೆ ಯಾರಾದರೂ ಶಾಕ್ ಆಗುತ್ತಾರೆ.
ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದರ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಅರ್ಧ ದಿನದ ರಜೆಗಾಗಿ ಮುಖ್ಯ ಶಿಕ್ಷಕನಿಗೆ ಹೇಳಿದ ಕಾರಣ ನೋಡಿದವರಿಗೆ ಎಂತವರಿಗೂ ಶಾಕ್ ಆಗುತ್ತಾರೆ. ಈ ವಿದ್ಯಾರ್ಥಿ 'ತಾನು ಸತ್ತು ಹೋಗಿದ್ದೇನೆಂದು' ಕಾರಣ ಹೇಳಿ ಅರ್ಧ ದಿನ ರಜೆ ನೀಡಬೇಕೆಂದು ಮುಖ್ಯ ಶಿಕ್ಷಕರಲ್ಲಿ ಮನವಿ ಮಾಡಿದ್ದಾನೆ. ಇದಕ್ಕೆ ಸ್ಪಂದನೆ ನೀಡಿ ಆತನಿಗೆ ರಜೆಯನ್ನೂ ನೀಡಿದ್ದಾರಂತೆ.
ಅಂದ ಹಾಗೆ ಈ ಘಟನೆ ನಡೆದಿರೋದು 2019ರ ಆಗಸ್ಟ್ ತಿಂಗಳಿನಲ್ಲಿ. ಆದರೆ ಮೂರು ವರ್ಷಗಳ ಬಳಿಕ ಇದೀಗ ಈ ರಜಾ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.