ಮಂಗಳೂರು: ಸ್ಟೇರಿಂಗ್ ಮುರಿದು ಬಸ್ ಪಲ್ಟಿ; ನಾಲ್ವರು ಪ್ರಯಾಣಿಕರಿಗೆ ಗಾಯ
Thursday, April 14, 2022
ಮಂಗಳೂರು: ಸಂಚಾರದಲ್ಲಿದ್ದ ಬಸ್ ನ ಸ್ಟೇರಿಂಗ್ ಮುರಿದು ಬಸ್ ಪಟ್ಟಿಯಾದ ಘಟನೆ ನಿನ್ನೆ ರಾತ್ರಿ 9ಗಂಟೆಗೆ ಮಂಗಳೂರಿನ ಹೊರವಲಯದಲ್ಲಿರುವ ಗಂಜಿಮಠದಲ್ಲಿ ಸಂಭವಿಸಿದೆ. ಈ ಅವಘಡದಲ್ಲಿ ನಾಲ್ವರು ಪ್ರಯಾಣಿಕರ ಮೂಳೆಮುರಿತವಾಗಿ ಗಾಯಗೊಂಡಿದ್ದಾರೆ.
ಶೃಂಗೇರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ನಿಶ್ಮಿತಾ ಎಂಬ ಖಾಸಗಿ ಬಸ್ ನಗರದ ಗಂಜಿಮಠದ ಪೆಟ್ರೋಲ್ ಪಂಪ್ ಸಮೀಪ ತಲುಪುತ್ತಿದ್ದಂತೆ ಸ್ಟೇರಿಂಗ್ ಏಕಾಏಕಿ ಮುರಿದಿದೆ. ಪರಿಣಾಮ ಬಸ್ ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಪ್ರಯಾಣಿಕರು ಮೂಳೆ ಮುರಿತದಿಂದ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿರುವ ಬಜ್ಪೆ ಪೊಲೀಸರು ಸಿಬ್ಬಂದಿ ಬಸ್ ಅನ್ನು ಸ್ಥಳೀಯರ ಸಹಕಾರದಿಂದ ತೆರವು ಮಾಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ ರಸ್ತೆ ಬದಿ ಮಗುಚಿ ಬಿದ್ದ ಪರಿಣಾಮ ಕೊಂಚ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ತಕ್ಷಣ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.