-->
ಮಂಗಳೂರು: ಟಿಪ್ಪರ್ ಲಾರಿ ಹರಿದು ಆರು ವರ್ಷದ ಬಾಲಕ ಮೃತ್ಯು!

ಮಂಗಳೂರು: ಟಿಪ್ಪರ್ ಲಾರಿ ಹರಿದು ಆರು ವರ್ಷದ ಬಾಲಕ ಮೃತ್ಯು!

ಮಂಗಳೂರು: ಟಿಪ್ಪರ್ ಲಾರಿ ಹರಿದ ಪರಿಣಾಮ 6ರ ಬಾಲಕನೋರ್ವ ಮೃತಪಟ್ಟಿರುವ ಘಟನೆಯೊಂದು ನಗರದ ಹೊರವಲಯದ ಬಜಾಲ್ ನ ಕಟ್ಟಪುಣಿ ಎಂಬಲ್ಲಿ ನಡೆದಿದೆ.

ಬಜಾಲ್ ನಿವಾಸಿ ಹಿದಾಯುತ್ತುಲ್ಲಾ ಎಂಬವರ ಪುತ್ರ ಮೊಹಮ್ಮದ್ ಜೀಶನ್(6) ಮೃತಪಟ್ಟ ದುರ್ದೈವಿ.

ಬಾಲಕ ಮೊಹಮ್ಮದ್ ಜೀಶನ್ ಸಾಯಂಕಾಲ 6 ಗಂಟೆಗೆ ಬಜಾಲ್ ಕಟ್ಟಪುಣಿ ಬಳಿಯ ಕೋಡ್ದಬ್ಬು ದೈವಸ್ಥಾನ ಬಳಿಯಿದ್ದ ರಸ್ತೆಯಲ್ಲಿ ಸೈಕಲ್ ನಲ್ಲಿ ಆಟವಾಡುತ್ತಿದ್ದ. ಈ ಸಂದರ್ಭ ಅಲ್ಲಿಯೇ ಸಂಚರಿಸುತ್ತಿದ್ದ ಟಿಪ್ಪರ್ ಸೈಕಲ್ ನಲ್ಲಿ ಆಡುತ್ತಿದ್ದ ಬಾಲಕನ ಮೇಲೆಯೇ ಹರಿದಿದೆ. ಪರಿಣಾಮ ಜೀಶನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Ads on article

Advertise in articles 1

advertising articles 2

Advertise under the article