ಭೀಕರ ರಸ್ತೆ ಅಪಘಾತದಲ್ಲಿ ಕಾರು ಪಲ್ಟಿ: ತಂದೆ - ಪುತ್ರ ದುರಂತ ಸಾವು!
Tuesday, April 5, 2022
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮೊನ್ನೆಯಷ್ಟೇ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಬಿಜೆಪಿ ಮುಖಂಡರೊಬ್ಬರ ಕಾಲು ತುಂಡಾಗಿದ್ದರೆ, ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟ ದುರಂತವೊಂದು ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಾನಾಪುರ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸ್ವಾಮಿ ಗಾಯಕವಾಡ (30) ಹಾಗೂ ಬಾಬು ಗಾಯಕವಾಡ (55) ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಅಕ್ಕಲಕೋಟ್ ನಿವಾಸಿಗಳಾಗಿರುವ ಸ್ವಾಮಿ ಗಾಯಕವಾಡ ಹಾಗೂ ಬಾಬು ಗಾಯಕವಾಡ, ಅಳಂದದಿಂದ ಅಕ್ಕಲಕೋಟ್ಗೆ ಹೋಗುವ ಸಂದರ್ಭ ಈ ಅಪಘಾತ ಸಂಭವಿಸಿದೆ.
ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.