ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರಿಂದ ಯುವತಿಯ ಮೇಲೆ ಆಸಿಡ್ ದಾಳಿ!
Tuesday, April 19, 2022
ಪಾಟ್ನಾ: ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಏಕಾಏಕಿ ಯುವತಿಯೋರ್ವಳ ಮೇಲೆ ಆಸಿಡ್ ದಾಳಿ ಮಾಡಿರುವ ಪೈಶಾಚಿಕ ಕೃತ್ಯವೊಂದು ಬಿಹಾರ ರಾಜ್ಯದ ರೋಹಟಕ್ ಜಿಲ್ಲೆಯಲ್ಲಿ ನಡೆದಿದೆ.
ಶಿಲ್ಪಾ ಕುಮಾರಿ ಎಂಬ ಯುವತಿ ತನ್ನ ಸಹೋದರನೊಂದಿಗೆ ಕುಟುಂಬಸ್ಥರ ಮನೆಗೆ ತೆರಳುತ್ತಿದ್ದಳು. ಈ ವೇಳೆ ಮುಖ ಮುಚ್ಚುವಂತೆ ಹೆಲ್ಮಟ್ ಧರಿಸಿದ್ದ ಇಬ್ಬರು ದುಷ್ಕರ್ಮಿಗಳು, ಯುವತಿಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ.
ಈ ದಾಳಿಯಿಂದ ಯುವತಿಯ ಮುಖದ ಅರ್ಧ ಭಾಗ ಸುಟ್ಟುಹೋಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.