![ಮೋಸ ಮಾಡಿದ ಪ್ರಿಯಕರನ ಮದುವೆ ತಡೆಯಲೆಂದು ಬಂದು ಯುವತಿಗೆ ವರನ ಕಡೆಯವರು ಮಾಡಿದ್ದೇನು ಗೊತ್ತೇ? ಮೋಸ ಮಾಡಿದ ಪ್ರಿಯಕರನ ಮದುವೆ ತಡೆಯಲೆಂದು ಬಂದು ಯುವತಿಗೆ ವರನ ಕಡೆಯವರು ಮಾಡಿದ್ದೇನು ಗೊತ್ತೇ?](https://blogger.googleusercontent.com/img/b/R29vZ2xl/AVvXsEi4W6XHZuGU27Ih5oDsEf0VwIqKAedSekOZwzyDIY1fOk1k6B6k8VFSFlAr1t5yt75qC-WD2az074W3N-Qmep6kbGEJTZGA_xlsCDL1Zha1JfKv0hoBJBG7jJaMSV8kr4nTC9zBxiJH9E_t/s1600/1650088402503519-0.png)
ಮೋಸ ಮಾಡಿದ ಪ್ರಿಯಕರನ ಮದುವೆ ತಡೆಯಲೆಂದು ಬಂದು ಯುವತಿಗೆ ವರನ ಕಡೆಯವರು ಮಾಡಿದ್ದೇನು ಗೊತ್ತೇ?
Saturday, April 16, 2022
ಹೈದರಾಬಾದ್: ಪ್ರಿಯತಮನ ಮದುವೆ ತಡೆಯಲು ಯತ್ನಿಸಿದ್ದ ಪ್ರೇಯಸಿಯನ್ನು ಮನಬಂದಂತೆ ಥಳಿಸಿದ್ದ ವರನ ಸಂಬಂಧಿಕರು ಆಕೆಯ ಜುಟ್ಟು ಹಿಡಿದು ಮದುವೆ ಮಂಟಪದಿಂದ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ಮಹಬೂಬಾಬಾದ್ ಜಿಲ್ಲೆಯ ಖಮ್ಮಮ್ ನಗರದಲ್ಲಿ ನಡೆಯಿತು.
ಕಳೆದ 8 ವರ್ಷದಿಂದ ಮದುಮಗ ಶ್ರೀನಾಥ್ ನನ್ನು ಪ್ರೀತಿಸುತ್ತಿದ್ದ ಈ ಯುವತಿ ಆತನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಳು. ಆತನನ್ನು ಮದುವೆಯಾಗುವ ಆಸೆ ಇಟ್ಟುಕೊಂಡಿದ್ದಳು. ಆದರೆ, ಇದೀಗ ಆಗಿದ್ದೇ ಬೇರೆ. ಯುವತಿ ಪ್ರಿಯಕರ ಶ್ರೀನಾಥ್ ಗಾಗಿ ತನ್ನ ಮನಸ್ಸು ಮಾತ್ರವಲ್ಲ ದೇಹವನ್ನೂ ಅರ್ಪಿಸಿದ್ದಳು. ಆದರೆ ಅದೆಲ್ಲವೂ ತನ್ನ ಬದುಕಿನಲ್ಲಿ ಅವೆಲ್ಲವೂ ನೆನಪುಗಳಾಗಿಯೇ ಉಳಿಯುತ್ತದೆ ಎಂದು ಆಕೆ ಯಾವತ್ತೂ ಅಂದುಕೊಂಡಿರಲಿಲ್ಲ.
ಆದರೆ, ಇಂದು ಆಕೆಯ ಈ ಕನಸುಗಳೆಲ್ಲಾ ಕಮರಿ ಹೋಗಿವೆ. ತನ್ನ 8 ವರ್ಷದ ನಿಷ್ಕಲ್ಮಶ ಪ್ರೀತಿ ಇಲ್ಲವಾಗಿದೆ. ಆದರೂ ಬೇರೆ ಮದುವೆಯಾಗುತ್ತಿರುವ ಪ್ರಿಯಕರನ ಮದುವೆ ತಡೆಯಲೆಂದು ಓಡೋಡಿ ಬಂದಿರುವ ಆಕೆಯನ್ನು ವರನ ಕಡೆಯ ಮೂವರು ಹೆಂಗಸರು ಮನ ಬಂದಂತೆ ಥಳಿಸಿ ಜುಟ್ಟು ಹಿಡಿದು ದರದರನೆ ಎಳೆದೊಯ್ದು ಮದುವೆ ಮಂಟಪದಿಂದ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂತ್ರಸ್ತ ಯುವತಿ 'ಶ್ರೀನಾಥ್ ತನ್ನನ್ನೇ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದ. ಆದರೆ ಈ ಬಗ್ಗೆ ತಿಳಿಯದೆ ನಾನು ಎಲ್ಲವನ್ನೂ ನಂಬಿ ಕುಳಿತಿದ್ದೆ. ಆದರೆ, ಇದೀಗ ಆತ ಬೇರೆ ಯುವತಿಯೊಂದಿಗೆ ಗುಟ್ಟಾಗಿ ಮದುವೆಯಾಗಿದ್ದಾನೆ. ತನ್ನನ್ನು ಪ್ರೀತಿಸಿದ ವ್ಯಕ್ತಿ ಬೇರೊಬ್ಬ ಯುವತಿಯನ್ನು ಮದುವೆಯಾಗುತ್ತಿದ್ದಾನೆ. ನಿಮ್ಮ ಮನೆ ಯುವಕ ನನ್ನನ್ನು ಪ್ರೀತಿಸಿ ದ್ರೋಹ ಬಗೆದಿದ್ದಾನೆ, ನ್ಯಾಯ ಕೊಡಿಸಿ ಎಂದು ಬೇಡಿಕೊಂಡರೂ ಕೇಳದೇ ವರನ ಸಂಬಂಧಿಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರೂ ಕನಿಷ್ಠ ಹಲ್ಲೆಯನ್ನು ತಡೆಯುವ ಪ್ರಯತ್ನವನ್ನೂ ಮಾಡಲಿಲ್ಲ' ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.