ಮಂಗಳೂರು: ಶಾಲಾ ವಿದ್ಯಾರ್ಥಿನಿಗೆ ಟಿಕೆಟ್ ನಲ್ಲಿ ಬರೆದು ಮೊಬೈಲ್ ನಂಬರ್ ನೀಡಿದ್ದ ಬಸ್ ನಿರ್ವಾಹಕನಿಗೆ ಧರ್ಮದೇಟು
Sunday, April 24, 2022
ಮಂಗಳೂರು: ಬಸ್ ನಿರ್ವಾಹಕನೋರ್ವನು 8ನೇ ತರಗತಿಯ ವಿದ್ಯಾರ್ಥಿನಿಗೆ ಟಿಕೆಟ್ ನಲ್ಲಿ ಬರೆದು ಫೋನ್ ನಂಬರ್ ನೀಡಿದ್ದಾಂದು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ ಬೋಂದೆಲ್ ನಲ್ಲಿ ನಡೆದಿದೆ.
ನಗರದ ಬೊಂದೆಲ್ ನಿಂದ ಸ್ಟೇಟ್ಸ್ ಬ್ಯಾಂಕ್ ನಡುವೆ ಸಂಚರಿಸುವ ರೂಟ್ ನಂಬರ್ 19 ರ ಬಸ್ ನಿರ್ವಾಹಕ 8ನೇ ತರಗತಿಯ ವಿದ್ಯಾರ್ಥಿನಿಗೆ ಟಿಕೆಟ್ ನಲ್ಲಿ ಬರೆದು ಫೋನ್ ನಂಬರ್ ನೀಡಿದ್ದನು. ಈ ಬಗ್ಗೆ ತಿಳಿದುಕೊಂಡ ವಿದ್ಯಾರ್ಥಿನಿಯ ತಾಯಿ ಹಾಗೂ ಸಾರ್ವಜನಿಕರು ಸೇರಿ ಆತನಿಗೆ ಧರ್ಮದೇಟು ನೀಡಿದ್ದಾರೆ.
ಈ ಬಗ್ಗೆ ಇನ್ನಷ್ಟೇ ಪೊಲೀಸರು ಪ್ರಕರಣ ದಾಖಲಿಸಬೇಕಾಗಿದೆ.